ಸರಣಿ ಅಪಘಾತ: ಇಬ್ಬರು ಲಾರಿ ಚಾಲಕರ ದುರ್ಮರಣ…

233
firstsuddi

ವಿಜಯಪುರ: ಎರಡು ಲಾರಿ ಮತ್ತು ಕಾರಿನ ನಡುವೆ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗದ ಝಳಕಿ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ  ನಡೆದಿದೆ. ಎರಡು ಲಾರಿಗಳು ಲಾರಿಗಳ ಮುಖಾಮುಖಿಯಾಗಿದ್ದು, ಬಳಿಕ ಒಂದು ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಹಾಗೂ ಕಾರು ಡಿಕ್ಕಿಯಾದ ಪರಿಣಾಮ ಲಾರಿ ರಸ್ತೆ ಬದಿ ಪಲ್ಟಿಯಾಗಿದೆ. ಲಾರಿಯಲ್ಲಿ ಕ್ಲೀನರ್ ಸಿಲುಕಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದ್ದು,  ಇಬ್ಬರು ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ಚಾಲಕರ ಮಾಹಿತಿ ತಿಳಿದುಬಂದಿಲ್ಲ.  ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.