ನಟ ಸುದೀಪ್ ವಿರುದ್ದ ವಂಚನೆ ಆರೋಪದಡಿ ದೂರು ದಾಖಲು.

916
firstsuddi

ಬೆಂಗಳೂರು- ದೀಪಕ್ ಎಂಬುವರು ಫಿಲ್ಮ್ ಚೇಂಬರ್ನಲ್ಲಿ ನಟ ಸುದೀಪ್ ವಿರುದ್ದ ದೂರು ದಾಖಲಿಸಿದ್ದು, ಖಾಸಗಿ ವಾಹಿನಿಯಲ್ಲಿ ನಟ ಸುದೀಪ್ ನಿರ್ಮಾಣದ `ವಾರಸ್ದಾರ’ ಎಂಬ ಧಾರಾವಾಹಿ ಮೂಡಿಬರುತ್ತಿತ್ತು. ಅದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ನನ್ನು  ಬಾಡಿಗೆಗೆ ಪಡೆಯಲಾಗಿತ್ತು. ಎಸ್ಟೇಟ್ ನ ಮಾಲೀಕರಾದ ದೀಪಕ್ ಇವರ ಮನೆ ಮತ್ತು ತೋಟವನ್ನು ಧಾರವಾಹಿಯ ಶೂಟಿಂಗ್ ಗಾಗಿ ಪಡೆಯಲಾಗಿದ್ದು , ಯಾವುದೇ ಬಾಡಿಗೆ ನೀಡಿಲ್ಲ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವಂಚಿತ ದೀಪಕ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.