ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೇಂದು ಹರಕೆ ಹೊತ್ತಿದ್ದ ಚಿತ್ರದುರ್ಗದ ಅಭಿಮಾನಿಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ…

523

 

ಚಿತ್ರದುರ್ಗ- ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿದ್ದ ಚಿತ್ರದುರ್ಗ ಜಿಲ್ಲೆ ಕಂಚೀಪುರ ತಾಲೂಕಿನ ಹತ್ತು ಜನ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮುಖ್ಯಮಂತ್ರಿಯಾದ ಮೊದಲ ದಿನದಿಂದಲೂ ಸಿಎಂ ಕುಮಾರಸ್ವಾಮಿ ಹಲವು ಸವಾಲುಗಳನ್ನ ಎದುರಿಸುತ್ತಿದ್ದಾರೆ. ಅವರ ನೈತಿಕ ಸ್ಥೈರ್ಯ ಕುಗ್ಗಿಸಲೆಂದೇ ಬಿಜೆಪಿ ಹಲವು ಆರೋಪಗಳನ್ನ ಮಾಡ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೂಡ ಕುಮಾರಸ್ವಾಮಿ ತೊಂದರೆ ಕೊಡಲೆಂದೇ ಮಾಡ್ತಿರೋ ಹಿಡನ್ ಅಜೆಂಡಾ ಎಂದು ದೇವರಲ್ಲಿ ಪ್ರಾರ್ಥಿಸಲು 219 ಕಿ.ಮೀ. ಪಾದಯಾತ್ರೆ ಹೊರಟಿದ್ದಾರೆ. ಏಳು ದಿನಗಳ ಪಾದಯಾತ್ರೆಯಲ್ಲಿ ಈಗಾಗಲೇ ಮೂರು ದಿನ ಕಳೆದಿದ್ದು ಪ್ರತಿ ರಾತ್ರಿ ದೇವಸ್ಥಾನಗಳಲ್ಲಿ ಆಶ್ರಯ ಪಡೆದು ಮುಂದೆ ಸಾಗುತ್ತಿದ್ದಾರೆ. ಸದ್ಯ ಇವರ ಪಾದಯಾತ್ರೆ ಚಿಕ್ಕಮಗಳೂರಿನಲ್ಲಿ ಸಾಗುತ್ತಿದೆ. ಕಾಲ್ನಡಿಗೆ ಮೂಲಕ ಸಾಗ್ತಿರೋ ಇವ್ರು ಕುಮಾರಸ್ವಾಮಿಗೆ ಎಲ್ಲಾ ಸವಾಲುಗಳನ್ನ ಧರ್ಮಸ್ಥಳದ ಮಂಜುನಾಥ ಸ್ವಾಮಿ ಎದುರಿಸುವ ಶಕ್ತಿ ನೀಡಲೆಂದು ಕುಮಾರಸ್ವಾಮಿ ಅಪ್ಪಟ ಭಕ್ತರಂತೆ ಹತ್ತು ಜನರೂ ಕುಮಾರಸ್ವಾಮಿಯ ಭಾವಚಿತ್ರವಿರೋ ಒಂದೇ ರೀತಿಯ ಟೀ ಶರ್ಟ್ ಧರಿಸಿಕೊಂಡು ಪಾದಯಾತ್ರೆ ತೆರಳುತ್ತಿದ್ದಾರೆ.