ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಕಳೆದ ವರ್ಷ ಹುಟ್ಟುಹಬ್ಬ ಬೇಡವೆಂದು ನಿರ್ಧರಿಸಿದ್ದರು. ಆದರೆ ಈ ಬಾರಿ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲು ನಿರ್ದರಿಸಿದ್ದಾರೆ. ಹಾಗೂ ಅಭಿಮಾನಿಗಳಿಗೆ ಕೆಲವು ಕಂಡೀಷನ್ ಗಳನ್ನು ಕೂಡ ಹಾಕಿದ್ದಾರೆ. ಸೆಪ್ಟೆಂಬರ್ 2ಕ್ಕೆ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಬರುವ ಯಾರು ಕೂಡ ಹೂವಿನಹಾರ, ಕೇಕ್, ಗಿಫ್ಟ್ ಗಳನ್ನು ತರಬಾರದು.ತಮ್ಮ ಹುಟ್ಟು ಹಬ್ಬದ ಸಂಭ್ರಮದ ನೆಪದಲ್ಲಿ ಇಂಥ ಅನಗತ್ಯ ವೆಚ್ಚ ಮಾಡುವ ಬದಲು ಅದೇ ಹಣವನ್ನು ಕೊಡಗು ಸಂಕಷ್ಟಕ್ಕೆ ನೆರವಾಗುವಂತೆ ಕಿಚ್ಚ ಅಭಿಮಾನಿಗಳಿಗೆ ತಿಳಿಸಿದ್ದಾರೆ.