ಹುಬ್ಬಳ್ಳಿ: ಮುಂದಿನ ಸಿಎಂ ನಾನೇ ಎಂದು ಮೈತ್ರಿ ಸರ್ಕಾರದಲ್ಲಿ ತಳಮಳ ಸೃಷ್ಟಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಅದಕ್ಕೆ ಸ್ಪಷ್ಟತೆಯನ್ನು ನೀಡಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಜನರ ಆಶೀರ್ವಾದ ಸಿಕ್ಕಿದರೆ ಮುಂದಿನ ಚುನಾವಣೆಯಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿದ್ದೆ, ನನ್ನ ಹೇಳಿಕೆಗೆ ನಮ್ಮ ಶಾಸಕರು ಮತ್ತು ನಾಯಕರು ಬೆಂಬಲ ಸೂಚಿಸಿದ್ದಾರೆ.ಜೆಡಿಎಸ್ ನವರು ಕೆ.ಸಿ. ವೇಣುಗೋಪಾಲ್ ಗೆ ಪತ್ರ ಬರೆದು ದೂರು ನೀಡಿಲ್ಲ, ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎನ್ನುವುದು ಸುಳ್ಳು , ಈ ಸರ್ಕಾರಕ್ಕೆ ಏನೂ ಧಕ್ಕೆಯಿಲ್ಲ, ಸಂಪೂರ್ಣ 5 ವರ್ಷ ಆಡಳಿತ ನಡೆಸಲಿದೆ, ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ ಎಂದರು.