ಬೆಂಗಳೂರು : ಪ್ರತಿ ಶನಿವಾರ ಬಿಗ್ಬಾಸ್ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುವುದು ಸಾಮಾನ್ಯ. ಆದರೆ ಶನಿವಾರಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ತೇಜಸ್ವಿನಿ ಬಿಗ್ ಮನೆಯಿಂದ ಹೊರ ನಡೆದಿದ್ದಾರೆ. ತೇಜಸ್ವಿನಿ ತಂದೆಯವರ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಿಡ್ನಿ ವೈಫಲ್ಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗಾಗಿ ತೇಜಸ್ವಿನಿ ಅವರ ಇರುವಿಕೆಯನ್ನು ತಂದೆ-ತಾಯಿ ಬಯಸುತ್ತಿದ್ದಾರೆ.
ಈ ವಿಷಯವನ್ನು ಬುಧವಾರ ತೇಜಸ್ವಿನಿ ಅವರಿಗೆ ತಿಳಿಸಲಾಗಿತ್ತು. ಅದೇ ರೀತಿ ಬೆಳಗಿನವರೆಗೆ ತಮ್ಮ ನಿರ್ಧಾರವನ್ನು ತಿಳಿಸಬೇಕಾಗಿ ಬಿಗ್ಬಾಸ್ ಸೂಚಿಸಿದ್ದರು. ತೇಜಸ್ವಿನಿ ಅವರ ಬೇಡಿಕೆ ಮೇರೆಗೆ ತಾಯಿಯೊಡನೆ ಮಾತನಾಡಲು ಬಿಗ್ಬಾಸ್ ಅನುವು ಮಾಡಿಕೊಟ್ಟರು. ಮಾತುಕತೆ ನಂತರ ಭಾವುಕರಾದ ತೇಜಸ್ವಿನಿ ಮನೆಯ ಸದಸ್ಯರ ಮುಂದೆ ತಮ್ಮ ನೋವು ತೋಡಿಕೊಂಡರು. ಅದೇ ರೀತಿ ತಾವು ಮನೆಯಿಂದ ಹೊರ ಹೋಗಲು ನಿರ್ಧರಿಸಿರುವುದಾಗಿಯೂ ಹೇಳಿಕೊಂಡರು.
ಭಾರವಾದ ಹೃದಯದಿಂದಲೇ ತೇಜಸ್ವಿನಿ ಬಿಗ್ಬಾಸ್ ಮನೆಗೆ ವಿದಾಯ ಹೇಳಿದರು. ಇನ್ನು ಈ ವಾರ ನಾಮಿನೇಟ್ಗೊಂಡ ಸ್ಪರ್ಧಿಗಳಲ್ಲಿ ತೇಜಸ್ವಿನಿ ಕೂಡ ಇದ್ದರು. ಬಿಗ್ಬಾಸ್ ಮನೆಗೆ ತೇಜಸ್ವಿನಿ ವಾಪಸ್ ಬರುತ್ತಾರೆಯೇ ಎನ್ನುವುದಿನ್ನೂ ಖಚಿತಗೊಂಡಿಲ್ಲ. ಬಿಗ್ ಮನೆಗೆ ಮರಳುವ ಆಶಯವನ್ನು ತೇಜು ವ್ಯಕ್ತಪಡಿಸಿದ್ದು, ಅವರನ್ನು ಬಿಗ್ಬಾಸ್ ವಾಪಸ್ ಕರೆಯಿಸಿಕೊಳ್ಳುತ್ತಾರೆಯೇ ಎಂದು ನೋಡಲು ಶನಿವಾರದ ಎಪಿಸೋಡ್ ನೋಡಬೇಕು