ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಹಾಡಿ ಹೊಗಳಿದ ಅಮೇರಿಕಾ ಅಧ್ಯಕ್ಷ ಟ್ರಂಪ್

575

ವಿಯೆಟ್ನಾಂ : ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹಾಡಿ ಹೊಗಳಿದ್ದಾರೆ. ಅರ್ಥವ್ಯವಸ್ಥೆಯಲ್ಲಿ ಭಾರತ ಅದ್ಭುತ ಪ್ರಗತಿ ಕಾಣುತ್ತಿದೆ ಹಾಗೂ ನರೇಂದ್ರ ಮೋದಿ ಅವರು ಇಂಥ ದೊಡ್ಡ ದೇಶ ಮತ್ತು ಜನರನ್ನು ಒಟ್ಟುಗೂಡಿಸಲು ಯಶಸ್ವಿಯಾಗಿ ಯತ್ನಿಸುತ್ತಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ (ಅಪೆಕ್) ಶೃಂಗದ ಪಾರ್ಶ್ವದಲ್ಲಿ ಪ್ರಮುಖ ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ಈ ಗುಂಪಿನಿಂದ ಹೊರಗಿರುವ ದೇಶಗಳು ಇಂಡೋ-ಪೆಸಿಫಿಕ್ ಹೊಸ ಅಧ್ಯಾಯ ಬರೆಯಲು ಮುಂದಡಿ ಇಡುತ್ತಿವೆ,’ ಎಂದು ಶ್ಲಾಘಿಸಿದರು. ಭಾರತ ಈಗ 70ನೇ ಸ್ವಾತಂತ್ರ್ಯ ದಿನೋತ್ಸವ ಆಚರಿಸಿಕೊಳ್ಳುತ್ತಿದೆ. 130 ಕೋಟಿ ಜನಸಂಖ್ಯೆಯನ್ನು ಅದು ಹೊಂದಿದ್ದು ಜಗತ್ತಿನ ಅತಿದೊಡ್ಡ ಸಾರ್ವಭೌಮ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ.

ಈ ದೇಶ ತನ್ನ ಅರ್ಥವ್ಯವಸ್ಥೆಯನ್ನು ತೆರೆದಿಟ್ಟಿದ್ದು, ಅದ್ಭುತ ಪ್ರಗತಿ ಕಾಣುತ್ತಿದೆ. ಆ ದೇಶದ ಮಧ್ಯಮ ವರ್ಗಕ್ಕೆ ಹೊಸ ಅವಕಾಶಗಳು ಒದಗಿ ಬರುತ್ತಿವೆ’ ಎಂದು ಅಭಿಪ್ರಾಯಪಟ್ಟರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ದೊಡ್ಡ ದೇಶ ಹಾಗೂ ಜನರನ್ನು ಒಟ್ಟುಗೂಡಿಸಲು ಯತ್ನಿಸುತ್ತಿದ್ದಾರೆ. ಅವರು ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮುಂದಡಿ ಇಡುತ್ತಿದ್ದಾರೆ’ ಎಂದು ಟ್ರಂಪ್ ಹೊಗಳಿದರು. ‘ನಾವು ಇಂಡೋ ಪೆಸಿಫಿಕ್‌ನ ಮಿತ್ರ’ ಎಂದೂ ಅವರು ಹೇಳಿಕೊಂಡರು. ಪ್ರಧಾನಿ ಮೋದಿ ಅವರು ಫಿಲಿಪ್ಪೀನ್ಸ್‌’ಗೆ ಇಂಡಿಯಾ-ಆಸಿಯಾನ್ ಹಾಗೂ ಪೂರ್ವ ಏಷ್ಯಾ ಶೃಂಗದಲ್ಲಿ ಪಾಲ್ಗೊಳ್ಳಲು ಭಾನುವಾರ ತೆರಳುತ್ತಿದ್ದಾರೆ. ಅಲ್ಲಿ ಅವರು ಟ್ರಂಪ್‌ರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here