ನವದೆಹಲಿ: ದೆಹಲಿಯಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ಸ್ ಅರವಿಂದ್ ಕಠ್ಪಲಿಯಾ ಎಂಬುವರು ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕಾರಣ ವಿಮಾನ ಸುಮಾರು ಆರು ಗಂಟೆ ತಡವಾಗಿ ಟೇಕ್ ಆಫ್ ಆದ ಘಟನೆ ಭಾನುವಾರ ನಡೆದಿದೆ. ಪೈಲಟ್ ಅರವಿಂದ್ ಕಠ್ಪಲಿಯಾ ಎಂಬುವರನ್ನು ವೈದ್ಯಾಧಿಕಾರಿಗಳು ವಿಮಾನ ಟೇಕ್ ಆಫ್ ಆಗುವ ಮುನ್ನ ಎರಡು ಬಾರಿ ಉಸಿರು ಪರೀಕ್ಷೆಗೆ ಒಳಪಡಿಸಿದಾಗ ಅವರು ಕುಡಿದು ವಿಮಾನ ಚಲಾಯಿಸಲು ಬಂದಿರುವುದು ದೃಢಪಟ್ಟಿದೆ. ಅವರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಿ, ಬೇರೊಬ್ಬ ಪೈಲೆಟ್ ಅನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಅರವಿಂದ್ ಕಠ್ಪಲಿಯಾ ಅವರ ವಿರುದ್ಧ ಪೈಲಟ್ಸ್ ಸಂಘ ದೂರು ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.










