ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಟ್ವಿಟ್ ಮೂಲಕ ಬಜೆಟ್ ನಲ್ಲಿ ರೈತರಿಗೆ ಘೋಷಣೆ ಮಾಡಿದ ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಅಡ್ಡಿಆತಂಕಗಳಿಲ್ಲದೆ ಕೂಡಲೇ ಜಾರಿಗೆ ಅನುವಾಗುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದು ಸಂತಸದ ಸುದ್ಧಿ. ಸಾಲ-ಮನ್ನಾ ಮಾಡುತ್ತೇವೆ ಎಂದು ಹೇಳಿ ಅಧಿಕಾರ ಕಬಳಿಸಿದ CoJa ಸರ್ಕಾರಕ್ಕೆ 8 ತಿಂಗಳಾದರೂ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ ಎಂದು ಟ್ವಿಟ್ ಮೂಲಕ ಸಮ್ಮಿಶ್ರ ಸರ್ಕಾರವನ್ನು ಟೀಕಿಸಿದ್ದಾರೆ.











