ಆನೆ ಕೊಂದು ದಂತ ಕದ್ದೊಯ್ದ ಕಿಡಿಗೇಡಿಗಳು…

427
firstsuddi

ಚಾಮರಾಜನಗರ: ನಾಡಬಂದೂಕಿನಿಂದ ಗುಂಡುಹಾರಿಸಿ ಆನೆಯನ್ನು   ಕೊಂದು ಅದರ ಎರಡೂ ದಂತಗಳನ್ನು ಕಳ್ಳತನ ಮಾಡಿರುವ ಘಟನೆ ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದ ಚಿಕ್ಕಲ್ಲೂರು ಗಸ್ತಿನಲ್ಲಿ  ನಡೆದಿದೆ.50 ವರ್ಷದ ಆನೆಗೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಬಳಿಕ ಆಸಿಡ್ ಬಳಸಿ ಅದರ ಎರಡೂ ದಂತಗಳನ್ನು ಕಿತ್ತು ಕದ್ದೊಯ್ದಿದ್ದಾರೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಆನೆಯ ಕಳೆ ಬರಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.