ಯಾದಗಿರಿ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆಗೆ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೊರನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಸಮಾವೇಶದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದ್ರು. ಬಳ್ಳಾರಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗೆ ದಲಿತ ಸಂಘಟನೆಗಳ ಪ್ರತಿಭಟನೆ ನಡೆಸಿ ಘೇರಾವ ಹಾಕಿದ್ರು. ಈ ವೇಳೆ ಮಾತನಾಡಿದ ಸಚಿವ ಅನಂತಕುಮಾರ ನಾಯಿಗಳು ಬಿದಿಯಲ್ಲಿ ಕುಳಿತು ಬೋಗಳಿದ್ರೆ ಅದಕ್ಕೆ ತಲೆಕೆಡಿಸಿಕೋಳ್ಳಲ್ಲ ಎಂದಿದ್ದಾರೆ. ಪದೆ ಪದೇ ಇಂತಹ ವಿವಾದಾತ್ಮಕ ಹೇಳಿಕೆ ನೀಡುವ ಅನಂತಕುಮಾರ ಒಬ್ಬ ಅನಾಗರಿಕ ವ್ಯಕ್ತಿ. ಅವರ ಪದ ಬಳಿಕೆ ಸರಿಯಲ್ಲ. ಕಾಡಲ್ಲಿ ಇರಬೇಕಾದವರು ನಾಡಲ್ಲಿದ್ದಾರೆ ಎಂದು ಅನಂತಕುಮಾರ ಹೆಗಡೆ’ಗೆ ಎಚ್ ಡಿ ಕೆ ಚಾಟಿ ಬಿಸಿದ್ರು.