ಕೋಲಾರ : ತಾಯಿ ಮಗನ ಕೊಲೆ ಪ್ರಕರಣದಲ್ಲಿ, ಓರ್ವ ಆರೋಪಿಗೆ ಮರಣ ದಂಢನೆ, ಮೂವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಕೋಲಾರದ ಹೆಚ್ಚುವರಿ ಹಾಗೂ ಜಿಲ್ಲಾ ಸತ್ತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೋಲಾರ ನಗರದ ಗೌರಿ ಪೇಟೆಯ ಕಂಬಳಿ ಮಢದಲ್ಲಿ ನಡೆದಿದ್ದ ಡಬಲ್ ಮರ್ಡರ್ ನ ನಾಲ್ಕು ಜನ ಆರೋಪಿಗಳು. ನ್ಯಾಯ್ಯಾದೀಶೆ ಬಿ.ಎಸ್. ರೇಖಾ ಅವರು ಆದೇಶ ಹೊರಡಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗೌರಿ ಪೇಟೆ ಕಂಬಳಿ ಮಠದಲ್ಲಿ ನಡೆದ ತಾಯಿ ಮಗನ ಕೊಲೆ ಪ್ರಕರಣವಾಗಿದೆ. ಹಣಕಾಸಿನ ವಿಚಾರ ಹಿನ್ನಲೆ ತಾಯಿ ಸುನಂದದೇವಿ (65) ಮಗ ಕುಮಾರಸ್ವಾಮಿ (44) ಯನ್ನ 21-10-2014 ರಂದು ಕೊಲೆ ಮಾಡಿದ್ದ ಆರೋಪಿಗಳು. ಪ್ರಮುಖ ಆರೋಪಿ ನರೇಂದ್ರಗೆ ಮರಣದಂಡನೆ, ಸುರೇಶ್ ಕುಮಾರ್, ಮುನಿರೆಡ್ಡಿ ಅಲಿಯಾಸ್ ಚಿಕ್ಕಗೆ ಜೀವಾವಧಿ ಹಾಗೂ 50 ಸಾವಿರ ದಂಡ ನೀಡಿದ್ದು, ಮತ್ತೊಬ್ಬ ಆರೋಪಿ ಕೆ. ಮುನಿರೆಡ್ಡಿಗೆ ಎರಡು ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿದೆ.