ನವದೆಹಲಿ : ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ಸೆಣಸಾಡಿ ವೀರಮರಣ ಹೊಂದಿದ 20 ಮಂದಿ ಯೋಧರ ವಿವರವನ್ನು ಸೇನೆ ಬಿಡುಗಡೆಗೊಳಿಸಿದೆ. ಸೋಮವಾರ ರಾತ್ರಿ ಲಡಾಖ್ ಗಡಿಯಲ್ಲಿ ನಡೆದ ಮಲ್ಲಯುದ್ಧದಲ್ಲಿ ಮೂವರು ಯೋಧರು ಹುತಾತ್ಮರಾಗಿ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಕಡಿಮೆ ಉಷ್ಣಾಂಶವಿದ್ದ ಕಾರಣದಿಂದಾಗಿ ಗಾಯಗೊಂಡಿದ್ದ ಎಲ್ಲಾ ಸೈನಿಕರು ಹುತಾತ್ಮರಾಗಿದ್ದರು. ಈಗಾ ಭಾರತೀಯ ಸೇನೆ ಚೀನಾ ದಾಳಿಯಲ್ಲಿ ಹುತಾತ್ಮರಾದ 20 ಮಂದಿ ಯೋಧರ ವಿವರವನ್ನು ಬಿಡುಗಡೆ ಮಾಡಿದ್ದು, ಇವರ ಹೆಸರುಗಳು ಇಂತಿವೆ.
1. ಕರ್ನಲ್ ಬಿ.ಸಂತೋಷ್ ಬಾಬು-ಹೈದರಾಬಾದ್(ತೆಲಂಗಾಣ
2. ಸುಬೇದಾರ್ ನಾದುರಾಮ್ ಸೊರೆನ್-ಮಯೂರ್‍ಭಂಜ್(ಒಡಿಶಾ)
3. ಸುಬೇದಾರ್ ಮಂದೀಪ್ ಸಿಂಗ್-ಪಟಿಯಾಲಾ(ಪಂಜಾಬ್)
4. ಸುಬೇದಾರ್ ಸತ್ನಾಮ್ ಸಿಂಗ್-ಗುರುದಾಸ್‍ಪುರ(ಪಂಜಾಬ್)
5. ಹವಾಲ್ದಾರ್ ಕೆ.ಪಳನಿ-ಮಧುರೈ(ತಮಿಳುನಾಡು)
6. ಹವಾಲ್ದಾರ್ ಸುನೀಲ್ ಕುಮಾರ್-ಪಾಟ್ನಾ(ಬಿಹಾರ)
7. ಹವಾಲ್ದಾರ್ ಬಿಪುಲ್ ರಾಯ್-ಮೀರತ್(ಉತ್ತರ ಪ್ರದೇಶ)
8. ಸಿಪಾಯಿ ದೀಪಕ್ ಕುಮಾರ್-ರೇವಾ(ಹರಿಯಾಣ)
9. ಸಿಪಾಯಿ ರಾಜೇಶ್ ಓರಂಗ್-ಬಿರ್‍ಬೂಮ್(ಪಶ್ಚಿಮ ಬಂಗಾಳ)
10. ಸಿಪಾಯಿ ಕೆ.ಕೆ. ಓಝಾ-ಸಾಹೀಬ್ ಗಂಜ್(ಜಾರ್ಖಂಡ್)
11. ಸಿಪಾಯಿ ಗಣೇಶ್ ರಾಮ್-ಕಂಕೇರ್(ಛತ್ತೀಸ್‍ಗಢ)
12. ಸಿಪಾಯಿ ಸಿ.ಕೆ. ಪ್ರಧಾನ್-ಕಂದಮಹಲ್(ಒಡಿಶಾ)
13. ಸಿಪಾಯಿ ಅಂಕುಷ್-ಅಮೀರ್‍ಪುರ(ಪಂಜಾಬ್)
14. ಸಿಪಾಯಿ ಗುರುವಿಂದರ್ ಸಿಂಗ್-ಸಂಗ್ರೂರ್(ಪಂಜಾಬ್)
15. ಸಿಪಾಯಿ ಗುರುತೇಜ್ ಸಿಂಗ್-ಮನ್ಸಾ(ಪಂಜಾಬ್)
16. ಚಂದನ್ ಕುಮಾರ್-ಭೋಜ್‍ಪುರ್(ಬಿಹಾರ)
17. ಸಿಪಾಯಿ ಕುಂದನ್ ಕುಮಾರ್-ಸಹರ್ಸಾ(ಬಿಹಾರ)
18. ಸಿಪಾಯಿ ಅಮನ್ ಕುಮಾರ್-ಸಮಷ್ಠಿಪುರ(ಬಿಹಾರ)
19. ಸಿಪಾಯಿ ಜೈ ಕಿಶೋರ್ ಸಿಂಗ್-ವೈಶಾಲಿ(ಬಿಹಾರ)
20. ಸಿಪಾಯಿ ಗಣೇಶ್ ಅನ್ಸಾಡ-ಪೂರ್ವಸಿಂಗ್‍ಭೂಮ್(ಪ.ಬಂಗಾಳ)










