ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಅನ್ನು ಖಾತೆದಾರರನ್ನು ಹೊರತುಪಡಿಸಿ ಬೇರೆ ಯಾರು ಬಳಸುವಂತಿಲ್ಲ…

633
firstsuddi

ಬೆಂಗಳೂರು– ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಅನ್ನು ಖಾತೆದಾರರನ್ನು ಹೊರತುಪಡಿಸಿ ಬೇರೆ ಯಾರು ಬಳಸುವಂತಿಲ್ಲ.ಅದು ನಿಯಮ ಉಲ್ಲಂಘನೆ ಎಂದು ಎಸ್‍ಬಿಐ ನಿರ್ದೇಶನಕ್ಕೆ ಕೋಟ್ ಸಮ್ಮತಿ ನೀಡಿದೆ.
ಮಾರತ್‍ಹಳ್ಳಿ ನಿವಾಸಿ ವಂದನಾ 2013ರಲ್ಲಿ ಹೆರಿಗೆ ರಜೆಯಲ್ಲಿದ್ದಾಗ ತಮ್ಮ ಡೆಬಿಟ್ ಕಾರ್ಡ್ ಅನ್ನು ಪತಿ ರಾಜೇಶ್ ಗೆ ನೀಡಿದ್ದರು. ಅವರು 25 ಸಾವಿರ ರೂ ಡ್ರಾ ಮಾಡಲು ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಹೋದಾಗ ಹಣದ ಡೆಬಿಟ್ ಸ್ಲಿಪ್ ಮಾತ್ರ ಬಂದಿರುತ್ತದೆ. ಹಣ ಬಂದಿರುವುದಿಲ್ಲ.ಆಗ ರಾಜೇಶ್ ಬ್ಯಾಂಕಿಗೆ ಕರೆ ಮಾಡಿದಾಗ ಎಟಿಎಂ ನಲ್ಲಿ ತಾಂತ್ರಿಕ ದೋಷವಿದ್ದು 24 ಗಂಟೆಯೊಳಗೆ ನಿಮ್ಮ ಖಾತೆಗೆ ಮರುಪಾವತಿ ಮಾಡುವುದಾಗಿ ಹೇಳಿದ್ದು, ಆದರೆ ಬ್ಯಾಂಕಿನವರು ಪಾವತಿಸದ ಕಾರಣ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ನೀವು ಹಣ ತೆಗೆದುಕೊಂಡಿದ್ದಿರಿ ನಿಮ್ಮ ಖಾತೆಯಿಂದ ಹಣ ಡೆಬಿಟ್ ಆಗಿದೆ ಎಂದು ತಿಳಿಸುತ್ತಾರೆ. ಆದರೆ ಎಟಿಎಂನಲ್ಲಿದ್ದ ಸಿ.ಸಿ ಟಿವಿ ಪರಿಶೀಲಿಸಿದಾಗ ಎಟಿಎಂ ಯಂತ್ರದಿಂದ ಹಣ ಬಂದಿಲ್ಲ ಎಂಬುದು ತಿಳಿದುಬಂದಿರುತ್ತದೆ. ಮತ್ತೆ ಬ್ಯಾಂಕಿಗೆ ದೂರು ನೀಡಿದಾಗ ಬ್ಯಾಂಕಿನವರು ಸಿಸಿ ಟಿ.ವಿ ಪರಿಶೀಲಿಸಿದಾಗ ಎಟಿಎಂ ನಲ್ಲಿ ವಂದನಾರವರ ಖಾತೆಯ ಎಟಿಎಂ ಬಳಸುವುದು ಖಾತೆದಾರರಲ್ಲ ಎಂದು ಸ್ಪಷ್ಟಪಡಿಸಿರುತ್ತಾರೆ.
ಮಾಹಿತಿಹಕ್ಕು ಮೂಲಕ ವಂದನಾ, ರಾಜೇಶ್, 2013 ನವೆಂಬರ್ 16ರಂದು ಎಟಿಎಂ ನಲ್ಲಿ ಹೆಚ್ಚುವರಿಯಾಗಿ 25ಸಾವಿರ ರೂ ಉಳಿದಿತ್ತು ಎಂದು ಬೆಂಗಳೂರು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದರು. ಮೂರು ವರ್ಷದ ಕಾನೂನು ಹೋರಾಟದಲ್ಲಿ ಎಸ್‍ಬಿಐ ಪರ ವಕೀಲರು 25ಸಾವಿರ ರೂ ಇರಲಿಲ್ಲ ಎಂದು ವರದಿ ಸಲ್ಲಿಸಿದರು.ಅದರಂತೆ ಅವರು ನವೆಂಬರ್ 16 ರಂದು ನಡೆಸಿದ ವ್ಯವಹಾರದಲ್ಲಿ 25 ಸಾವಿರ ರೂ ಎಟಿಎಂನಿಂದ ಡೆಬಿಟ್ ಆಗಿದೆ ಎಂದು ದಾಖಲೆ ಸಹಿತ ಮುಂದಿಟ್ಟರು.ಇದನ್ನು ಪರಿಶೀಲಿಸಿದ ಕೋರ್ಟ್ ವಂದನಾ ಅವರ ಪತಿಗೆ ಚೆಕ್ ನೀಡಿ ಹಣ ಡ್ರಾ ಮಾಡಿಕೊಳ್ಳಬಹುದು ಆದರೆ ಎಟಿಎಂ ಪಿನ್ ನೀಡಿ ಹಣ ಡ್ರಾ ಮಾಡಿಕೊಳ್ಳುವಂತಿಲ್ಲ ಎಂದು ಪ್ರಕರಣವನ್ನು ವಜಾಗೊಳಿಸಿದೆ. ವಂದನಾ ಅವರ ದೂರಿನಂತೆ ಸಿಸಿ ಟಿವಿ ದಾಖಲೆಯಂತೆ ಎಟಿಎಂನಲ್ಲಿ 25ಸಾವಿರ ಹೆಚ್ಚುವರಿ ಹಣ ಇತ್ತು ಆದರೂ ವಂದನಾ ಅವರ ಡೆಬಿಟ್ ಕಾರ್ಡ್‍ಅನ್ನು ತನ್ನ ಪತಿ ರಾಜೇಶ್ ಗೆ ನೀಡಿದ್ದರಿಂದ ಹಣ ಕಳೆದುಕೊಳ್ಳಬೇಕಾಯಿತು.