ಮೂಡಿಗೆರೆ: ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸದ ನಿಮಿತ್ತ ಹೋದರೆ ಅಧಿಕಾರಿಗಳಿಂದ ಕೆಲಸಗಳು ವಿಳಂಬವಾಗಿ ಸಾಗುತ್ತಲೆ ಇರಲಿಲ್ಲ. ಕಂಪ್ಯೂಟರ್ ವ್ಯವಸ್ಥೆಯೂ ಇಲ್ಲದೇ ಅಧಿಕಾರಿಗಳು ದಾಖಲೆಗಳನ್ನು ಕೈಯಲ್ಲೇ ಬರೆದು ಕೊಡುವ ವ್ಯವಸ್ಥೆ ಆದಿಯಲ್ಲಿತ್ತು.ಆದರೆ ಈಗ ಆಧುನಿಕತೆಯ ವೈಭವೀಕರಣದಿಂದ ಎಲ್ಲವೂ ಬದಲಾಗಿ ಹೋಗಿದೆ.ಬರೀ ಬ್ಯಾಂಕ್ಗಳು ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಯ ದಾರಿಯಲ್ಲಿ ಸಾಗುತ್ತಿದ್ದವು.ಆದರೆ ಈಗ ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿಗಳ ಅಭಿವೃದ್ದಿಗೆ ಮುಂದಾಗಿ ಹೈಟೆಕ್ ವ್ಯವಸ್ಥೆಯ ದಾರಿಯತ್ತ ಸಾಗಲು ಯೋಜನೆ ರೂಪಿಸಿ ಮೂಡಿಗೆರೆ ತಾಲ್ಲೂಕಿನಲ್ಲೇ ಬಣಕಲ್ನಲ್ಲಿ ಪ್ರಥಮ ಹೈಟೆಕ್ ಗ್ರಾ.ಪಂ.ಕಟ್ಟಡದ ಜೊತೆಗೆ ಬ್ಯಾಂಕಿಂಗ್ ವ್ಯವಸ್ಥೆ ತಲೆ ಎತ್ತಿರುವುದು ಗ್ರಾಮಗಳ ಅಭಿವೃದ್ದಿಯ ಸಂಕೇತಗಳಲ್ಲಿ ಒಂದಾಗಿದೆ.
ಮೊದಲೆಲ್ಲಾ ಗ್ರಾ.ಪಂ.ಕಟ್ಟಡದ ಒಳಗೆ ಪ್ರವೇಶಿಸಿದರೆ ಕಡತಗಳು ಕಬ್ಬಿಣದ ರ್ಯಾಕ್ಗಳಲ್ಲಿ ದೂಳು ತುಂಬಿ ಕೂತು ಬಿಡುತ್ತಿದ್ದವು.ಅದನ್ನು ಹುಡುಕುವುದೇ ಒಂದು ಸಾಧನೆ ಎಂಬಂತೆ ಸಿಬ್ಬಂದಿಗಳ ಕಾರ್ಯವಾಗಿತ್ತು.ಆದರೆ ಈಗ ಹೈಟೆಕ್ ಗ್ರಾ..ಪಂ ಕಟ್ಟಡಗಳ ಒಳಗೆ ಹೋದರೆ ನಗುಮುಖದ ಸೇವೆ ಜೊತೆ ಬ್ಯಾಂಕಿಂಗ್ ವ್ಯವಸ್ಥೆಗೆ ಸಿಧ್ದತೆ ಮಾತ್ರವಲ್ಲದೇ ಎಲ್ಲವೂ ಗಣಕೀಕೃತವಾಗಿ ಗ್ರಾಮಸ್ಥರು ಅವರ ಕೆಲಸಗಳನ್ನು ಆದಷ್ಟು ಶೀಘ್ರದ ವ್ಯವಸ್ಥೆಯಲ್ಲಿ ಮಾಡಬಹುದು.
ಕೇವಲ ಒಂದು ತಿಂಗಳ ಹಿಂದೆ ಬಣಕಲ್ನಲ್ಲಿ ಸುಸಜ್ಜಿತವಾದ ಗ್ರಾ.ಪಂ.ಕಟ್ಟಡ ತಲೆ ಎತ್ತಿ ನಿಂತಿದೆ.ಕಟ್ಟಡದ ಒಳಗೆ ಪ್ರವೇಶ ಪ್ರವೇಶಿಸಿದರೆ ಸುಸಜ್ಜಿತ ವಿಸ್ತಾರವಾದ ಕೋಣೆ ಇದ್ದು ಬದಿಯಲ್ಲಿ ಗ್ರಾಮಸ್ಥರಿಗೆ ಕುಳಿತುಕೊಳ್ಳಲು ಆಸನಗಳು ಅಚ್ಚುಕಟ್ಟಾಗಿ ಜೋಡಿಸಲಾಗಿದೆ.ಇನ್ನು ಎಡ ಬದಿಯಲ್ಲಿ ಪ್ರತಿಯೊಂದು ಕೆಲಸಗಳಿಗೆ ಅದರದೇ ಆದ ಕಂಪಾರ್ಟ್ಮೆಂಟ್ ವ್ಯವಸ್ಥೆ ಅಚ್ಚುಕಟ್ಟಾಗಿದೆ.ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ಮತ್ತು ಗ್ರಾ..ಪಂ ಅಧ್ಯಕ್ಷರ ಕೋಣೆಗಳು ಪ್ರತ್ಯೇಕವಾಗಿ ಇರಿಸಿದ್ದು ನೋಡಿದರೆ ಬ್ಯಾಂಕ್ಗಳಲ್ಲಿ ಆಗುವ ಅನುಭವ ಬಣಕಲ್ ಗ್ರಾ.ಪಂನಲ್ಲಿ ಆಗುತ್ತಿದೆ.ಇವೆಲ್ಲಾ ಆಗಬೇಕಾದರೆ ಬಣಕಲ್ ಸುತ್ತಮುತ್ತಲ ಉಧಾರ ಧಾನಿಗಳ ಆರ್ಥಿಕ ಮತ್ತು ಉತ್ತೇಜನದ ಪರಿಶ್ರಮವಿದೆ.ಪಂಚಾಯತ್ ರಾಜ್ ಇಲಾಖೆಯ ಅನುಧಾನವೂ ಸೇರಿದ್ದು ವ್ಯವಸ್ಥಿತ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗಲು ಸಹಾಯಕವಾಗಿದೆ.ಇನ್ನು ಹಿಂದಿನ ಹಾಗೂ ಪ್ರಸ್ತುತ ಗ್ರಾಮ ಪಂಚಾಯಿತಿ ಆಡಳಿತ ವರ್ಗ,ಸದಸ್ಯರು ಹಾಗೂ ಧಾನಿಗಳ ನೆರವು ಗ್ರಾಮ ಪಂಚಾಯಿತಿ ನೂತನ ಕಟ್ಟಡ ನೇರವಾಗಿ ನಿಲ್ಲಲು ಅನುಕೂಲವಾಗಿದೆ ಎನ್ನುತ್ತಾರೆ ಪ್ರಸ್ತುತ ಬಣಕಲ್ ಗ್ರಾ.ಪಂ.ಅಧ್ಯಕ್ಷ ಬಿ.ವಿ.ಸುರೇಶ್.
ಸದ್ಯಕ್ಕೆ ಬಣಕಲ್ ಗ್ರಾ.ಪಂ.ಬ್ಯಾಂಕಿಂಗ್ ವ್ಯವಸ್ಥೆಗೆ ಸಕಲ ಸಿದ್ದತೆಯನ್ನು ಗ್ರಾ.ಪಂ.ಕಟ್ಟಡದಲ್ಲಿ ಮಾಡಲಾಗಿದೆ.ಪಂಚಾಯಿತ್ ರಾಜ್ ಇಲಾಖೆ ಆದೇಶ ಬಂದ ಕೂಡಲೇ ಬ್ಯಾಂಕಿಂಗ್ ವ್ಯವಸ್ಥೆ ಕೂಡ ಕಾರ್ಯಾರಂಭವಾಗುತ್ತದೆ.ಇಂತಹ ಉತ್ತಮ ಸೌಲಭ್ಯ ನೀಡುವ ಗ್ರಾ.ಪಂ.ಗಳು ಇನ್ನಾದರೂ ಜನರ ಮೂಲಭೂತ ಸೌಲಭ್ಯದ ಜೊತೆಗೆ ಆರ್ಥಿಕ ಸೌಲಭ್ಯಕ್ಕೂ ಉತ್ತಮ ಯೋಜನೆ ನಿರ್ಮಾಣ ಮಾಡಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.