ಗಂಡ-ಮಗ ಬಿರಿಯಾನಿ ತಿಂದಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ…

1081
firstsuddi

ಬೆಂಗಳೂರು: ಗಂಡ-ಮಗ ಬಿರಿಯಾನಿ ತಿಂದಿದ್ದಕ್ಕೆ ಬೇಸರ ಮಾಡಿಕೊಂಡ ಮಹಿಳೆ ಮನೆ ಬಿಟ್ಟು ಹೋಗಿರುವ ಘಟನೆ ಕಮ್ಮಗೊಂಡನಹಳ್ಳಿ ಯಲ್ಲಿ ನಡೆದಿದ್ದು, ನನಗೆ ಬಿರಿಯಾನಿ ವಾಸನೆ ಆಗುವುದಿಲ್ಲ ಮನೆಗೆ ತಂದು ತಿನ್ನಬೇಡಿ ಎಂದು ಅನಿತಾ ಈ ಮೊದಲೇ ಗಂಡ ಹಾಗೂ ಮಗನಿಗೆ ಹೇಳಿದ್ದರು. ಆದರೆ ಆಕೆಯ ಗಂಡ ರಾಜು ಸರ್ಕಾರ್ ಮನೆಗೆ ಬಿರಿಯಾನಿ ತಂದು ಮಗ ಆದರ್ಶ ಜೊತೆ ತಿನ್ನುತ್ತಿದ್ದರು. ಇದನ್ನು ನೋಡಿದ ಅನಿತಾ ಪತಿ ಜತೆ ಜಗಳವಾಡಿ ಇನ್ಮುಂದೆ ಅಡುಗೆ ಮಾಡುವುದಿಲ್ಲ ಎಂದು ಹೇಳಿದ್ದರು. ಅಷ್ಟಕ್ಕೇ ಸುಮ್ಮನಾಗದೆ ಅವರಿಬ್ಬರೂ ಇಲ್ಲದಿದ್ದಾಗ ಮನೆ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.