| ಉಬ್ಬಿದ ಕೆನ್ನೆ, ಚೂಪಾದ ಗದ್ದ, ಹೊಳೆಯುವ ಮುಖ ಎಲ್ಲರಿಗೂ ಇಷ್ಟ. ಪ್ರತಿಯೊಬ್ಬರೂ ತಮ್ಮ ಮುಖ ಹಾಗೂ ದೇಹ ಸೌಂದರ್ಯದತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಹುಟ್ಟಿನಿಂದಲೇ ಅಂತಹಾ ಮುಖ ಪಡೆಯುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಪ್ರತಿಯೊಬ್ಬರು ಅದಕ್ಕಾಗಿ ಹಲವಾರು ರೀತಿಯ ಸರ್ಕಸ್ ಮಾಡುತ್ತಾರೆ. ಹಾಗಾಂತ ಯಾರೂ ಕೊರಗಬೇಕಾಗಿಲ್ಲ. ಬದಲಾಗಿ ಕೆಲವೊಂದು ವ್ಯಾಯಾಮಗಳನ್ನ ಮಾಡಿದ್ರೆ ಸಾಕು, ಅದು ನಿಮ್ಮ ಮುಖವನ್ನು ನಿಮ್ಮ ಇಚ್ಛೆಯಂತೆ ಬದಲಾಯಸುತ್ತೆ. |
ಹಲ್ಲುಗಳ ವ್ಯಾಯಾಮ :
ನೀವು ನೇರವಾಗಿ ಕುಳಿತುಕೊಂಡಾಗ ಸಾಧ್ಯವಾದಷ್ಟು ಕೆಳ ದವಡೆಯನ್ನ ಕೆಳಗಿಳಿಸಲು ಯತ್ನಿಸಿ. ಕೆಳ ದವಡೆಯ ಚಲನೆಯಿಂದ ಕೆನ್ನೆಯ ಮೇಲೆ ಒತ್ತಡ ಬೀಳುವಂತೆ ಮಾಡಿ. ಪ್ರತಿದಿನ ಈ ವ್ಯಾಯಾಮವನ್ನ 10 ಸೆಕೆಂಡ್ ಮಾಡಿ. ಸ್ವಲ್ಪ ಹೊತ್ತು ನಿರಾಳಗೊಂಡು ಪ್ರತಿದಿನ ಇದೇ ವ್ಯಾಯಾಮವನ್ನು ಕನಿಷ್ಠ 10 ಬಾರಿ ಮಾಡಿ ಕ್ರಮೇಣ ನಿಮ್ಮ ಫೇಸ್ ನೀವು ಅಂದುಕೊಂಡಂತೆ ಆಗುತ್ತೆ.
ನಾಲಗೆಯ ವ್ಯಾಯಾಮ :
ನಾಲಗೆಯನ್ನು ಕೆಳ ದವಡೆಯಿಂದ ಹೊರಚಾಚಿ. 10 ಸೆಕೆಂಡುಗಳ ಕಾಲ ಇದನ್ನು ಮುಂದುವರಿಸಿ, ಕೆನ್ನೆಯಲ್ಲಿ ಹರಡಿಕೊಂಡಿರುವ ಮಾಂಸ ಖಂಡದ ಮೇಲೆ ಒತ್ತಡ ಹೇರಿ, ಮಾಂಸ ಖಂಡದ ಮೇಲೆ ಒತ್ತಡ ಬಿದ್ದಿರುವುದನ್ನು ಖಾತರಿ ಪಡಿಸಿಕೊಳ್ಳಿ. ಪ್ರತಿದಿನ ಹೀಗೆ ಮಾಡುತ್ತೀರಿ. ಕ್ರಮೇಣ ನಿಮ್ಮ ಕೆನ್ನೆ ನೋಡಲು ಸುಂದರವಾಗುವಂತಹಾ ಶೇಪ್ ಗೆ ಬರುತ್ತೆ.
ನಕ್ಕು ಬಿಡಿ :
ಮುಖಕ್ಕೆ ನಗುವಿಗಿಂತ ದೊಡ್ಡ ವ್ಯಾಯಾಮ ಮತ್ತೊಂದಿಲ್ಲ. ಆದರೆ, ನಗುವಾಗ ತುಟಿಯನ್ನು ಬಿರಿಯದೆ 10 ಸೆಕೆಂಡುಗಳ ಕಾಲ ಹಾಗೇ ಇರಿ. ಆಮೇಲೆ, ತುಟಿಗಳನ್ನು ರಿಲ್ಯಾಕ್ಸ್ ಪೊಸಿಶನ್ಗೆ ತನ್ನಿ. ಈ ರೀತಿ ಮಾಡುವುದರಿಂದ ಮುಖದ ರಚನೆ ಸರಿಯಾಗೋದ್ರ ಜೊತೆ ನಿಮ್ಮ ಮೂಡ್ನ್ನ ಕೂಡ ಲವಲವಿಕೆಯಿಂದ ಇಡುತ್ತೆ.
ಮಾತಿನ ವ್ಯಾಯಾಮ
ಆಕ್ರಮಣಕಾರಿಯಾಗಿ ಭಾವನೆಗಳನ್ನು ಹೊರ ಹಾಕುವುದು ಮುಖದ ಕೊಬ್ಬನ್ನು ಇಳಿಸುವ ಉತ್ತಮ ವ್ಯಾಯಾಮ. ಮುಖ ಮಾಂಸ ಖಂಡಗಳ ಚಲನೆಗಾಗಿ ಎಕ್ಸ್, ಒ ಮುಂತಾದ ಅಕ್ಷರಗಳನ್ನ ಹೆಚ್ಚಾಗಿ ಬಳಸಿ ಹಾಗೂ ಉಚ್ಚರಿಸಿ. ದಿನಕ್ಕೆ ಕನಿಷ್ಠ 10 ಬಾರಿಯಾದರೂ ಹೀಗೆ ಮಾಡಿ. ಹೀಗೆ ಮಾಡುವುದರಿಂದ ಮುಖದ ಮಾಂಸ ಖಂಡಗಳು ಬಿಗಿಯಾಗುತ್ತವೆ.
ಸುಂದರ ವದನದ ಕನಸು ಕಾಣ್ತಿದ್ದೋರು ಮೇಲೆ ಹೇಳಿದ ಹಾಗೇ ಮಾಡಿ. ಮುಖವನ್ನ ಸುಂದರ ಹಾಗೂ ಸ್ಲಿಮ್ ಆಗಿಸಿಕೊಳ್ಳಿ…..










