ಬೆಂಗಳೂರು- ಲಕ್ಷ್ಮಿಪುರ ಗ್ರಾಮದ ಕಾಲೋನಿ ನಿವಾಸಿ ಬಸವರಾಜು ಹಾಗೂ ಮಂಜುಳಾ ದಂಪತಿಯ ಪುತ್ರ ನಿರಂಜನ್(14) ಬೆಂಗಳೂರು ಉತ್ತರದ ಗಂಗಗೊಂಡನಹಳ್ಳಿ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೆಳಗ್ಗೆಯೇ ಹೋಮ್ ವರ್ಕ್ ಮಾಡಲು ವಿದ್ಯಾರ್ಥಿ ಶಾಲೆಯ ಬಳಿ ತೆರಳಿದ್ದ ಎನ್ನಲಾಗಿದ್ದು, ಬಳಿಕ ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದ್ದು, ಪೋಷಕರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.