ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಆಶ್ಲೇಷ ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಎರಡು ತಿಂಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಮಲೆನಾಡಿಗರ ಜನಜೀವನ ಅಕ್ಷರಶಃ ನೀರುಪಾಲಾಗಿದ್ದು ,ಇದೀಗ ಮತ್ತೆ ಮಳೆ ಆರ್ಭಟಿಸುತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು . ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸುರಿಯುತ್ತಿರೋ ಮಳೆಯಿಂದ ಅಡಿಕೆ, ಕಾಫಿ, ಮೆಣಸು ಸಂಪೂರ್ಣ ನೆಲಕ್ಕುದುರುತ್ತಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಕುದುರೆಮುಖ, ಕಳಸ ಭಾಗದಲ್ಲಿ ಸುರಿಯುತ್ತಿರೋ ಮಳೆಯಿಂದ ಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇನ್ನು ಕೆರೆಕಟ್ಟೆ, ಕಿಗ್ಗಾ ಹಾಗೂ ಶೃಂಗೇರಿಯ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ತುಂಗಾ ನದಿ ಕೂಡ ಮೈದುಂಬಿ ಹರಿಯುತ್ತಿದ್ದು . ಮಲೆನಾಡಿನ ಮಳೆಗೆ ತುಂಗಾ ಹಾಗೂ ಭದ್ರ ನದಿಯ ತಟದ ಜನರಿಗೆ ನೆರೆಹಾವಳಿಯ ಭೀತಿ ಎದುರಾಗಿದ್ದು, ಹೇಮಾವತಿ ನದಿಯೂ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬೈರಾಪುರ, ಗೌಡಹಳ್ಳಿ, ದಾರದಹಳ್ಳಿ, ಸೇರಿದಂತೆ ಮೂಡಿಗೆರೆ ತಾಲೂಕಿನ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಇತ್ತ ಮಲೆನಾಡಿನಾದ್ಯಂತ ಭಾರೀ ಗಾಳಿಯೊಂದಿಗೆ ಸುರಿಯುತ್ತಿರೋ ಮಳೆಯಿಂದ ಮರದ ಟೊಂಗೆಗಳು ವಿದ್ಯುತ್ ತಂತಿ ಮೇಲೆ ಹರಿದು ಬಿದ್ದು ಮಲೆನಾಡಿನ ಕೆಲವು ಗ್ರಾಮೀಣ ಪ್ರದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದ್ದು, ನಿರಂತರವಾಗಿ ಸುರಿಯತ್ತಿರೋ ಮಳೆಯಿಂದ ಜನರ ಕೆಲಸ ಕಾರ್ಯಗಳಿಗೂ ಸಾಕಷ್ಟು ತೊಂದರೆಯಾಗಿದ್ದು, ಮಳೆ ನಿಂತರೇ ಸಾಕಾಪ್ಪ ಎಂದು ವರುಣ ದೇವನಲ್ಲಿ ಮೊರೆ ಇಟ್ಟಿದ್ದಾರೆ.