ಬೆಂಗಳೂರು- ಆರ್ ಆರ್ ನಗರದಲ್ಲಿ ಭೂಮಿ ಕಂಪಿಸಿದ್ದು ಭಾರೀ ಸದ್ದು ಆಗಿದ್ದು, ನಗರದ ರಾಜಾಜಿನಗರ, ಜೈನಗರ, ಜೆ.ಪಿ ನಗರ, ಹಾಗೂ ಕುಮಾರಸ್ವಾಮಿ ಲೇಔಟ್ ನಲ್ಲೂ ಕೂಡ ಕಂಪನ ಅನುಭವವಾಗಿದ್ದು, ಡಾಲರ್ಸ್ ಕಾಲೋನಿಯಲ್ಲಿ ಜೋರಾಗಿ ಸದ್ದು ಕೇಳಿಸಿದ್ದು, ಸದ್ದಿಗೆ ಭಯಭೀತರಾಗಿ ಮನೆಯಿಂದ ಹೋರಬಂದಿರುವ ಘಟನೆ ನಡೆದಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.