ಮನೆಯ ಗೋಡೆ ಕುಸಿದು ತಾಯಿ ಸೇರಿದಂತೆ ಇಬ್ಬರು ಮಕ್ಕಳ ಸಾವು.

238
firstsuddi

ಕಲಬುರಗಿ: ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ಆಳಂದದ ಹಿತ್ತಲಶಿರೂರು ಗ್ರಾಮದಲ್ಲಿ ಪಕ್ಕದ ಮನೆಯ ಗೋಡೆ ಕುಸಿದು ಪ್ರಭು ಎನ್ನುವವರ ಮನೆಯ ಮೇಲೆ ಬಿದ್ದು ಮನೆಯೊಳಗೆ ಮಲಗಿದ್ದ ತಾಯಿ ಲಕ್ಷ್ಮೀ ಬಾಯಿ (30) ಮಕ್ಕಳಾದ ಯಲ್ಲಮ್ಮ (11),ಅಂಬಿಕಾ (10) ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮನೆಯಲ್ಲಿದ್ದ ಪ್ರಭು ಅವರು ಗಾಯಗೊಂಡಿದ್ದು , ಗಂಭೀರ ಸ್ವರೂಪದಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಂಬರ್ಗಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.