ಬೆಂಗಳೂರು: ಬಿಗ್’ಬಾಸ್ 6ನೇ ಆವೃತ್ತಿಯ ವಿನ್ನರ್ ಆಗಿ ಮಾರ್ಡನ್ ರೈತ ಶಶಿಕುಮಾರ್ ಅವರು ಹೊರಹೊಮ್ಮಿದ್ದಾರೆ. ಇನ್ನು ರನ್ನರ್ ಅಪ್ ನವೀನ್ ಸಜ್ಜು ಆಗಿದ್ದಾರೆ. 6 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ವಿನ್ನರ್ ಹೆಸರು ಘೋಷಣೆ ಮಾಡಿದರು.
ಗ್ರ್ಯಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ಶಶಿಕುಮಾರ್ ಹಾಗೂ ನವೀನ್ ಸಜ್ಜು ಪ್ರಶಸ್ತಿಯ ಕಣದಲ್ಲಿದ್ದರು. ಆನಂತರ ಸಾಕಷ್ಟು ಮಾತುಕತೆ, ತಮಾಶೆ, ಹಾಡು ಡ್ಯಾನ್ಸ್ ಬಳಿಕ ಬಿಗ್ ಬಾಸ್ ವಿನ್ನರ್ ಘೋಷಣೆ ಮಾಡಲಾಯಿತು. ವಿನ್ನರ್ ಶಶಿಕುಮಾರ್ 50 ಲಕ್ಷ ರೂಪಾಯಿ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.










