ಮೆಟ್ರೋ ಎಸ್ಕಲೇಟರ್ ನಿಂದ ಬಿದ್ದು  ಮಗು ಸಾವು…

219
firstsuddi

ಬೆಂಗಳೂರು: ಮೆಟ್ರೋ ಎಸ್ಕಲೇಟರ್ ನಿಂದ  ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.  ನಿನ್ನೆ ರಾತ್ರಿ ಶ್ರೀರಾಂಪುರ ಮೆಟ್ರೋ ಸ್ಟೇಷನ್​ನಲ್ಲಿ ಅಜ್ಜಿ ಜೊತೆ ತೆರಳುತ್ತಿದ್ದ ಸಂದರ್ಭದಲ್ಲಿ  ಹಾಸಿನಿ  ಎಂಬ ಮಗು ಎಸ್ಕಲೇಟರ್​ ನಿಂದ  ಕೆಳಗೆ ಬಿದ್ದು, ಹಾಸಿನಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು,   ಕೂಡಲೇ ಮಗುವನ್ನು ಇಂದಿರಾ ಗಾಂಧಿ‌ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ  ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.