ಬಿಜೆಪಿ ಜನಾರ್ಧನ ರೆಡ್ಡಿಯವರ ಮೇಲೆ ಅವಲಂಬಿತವಾಗಿ ರಾಜಕೀಯ ಮಾಡ್ತಾ ಇಲ್ಲ: ಸಿ.ಟಿ.ರವಿ…

798
firstsuddi

ಚಿಕ್ಕಮಗಳೂರು : ಜನಾರ್ಧನ ರೆಡ್ಡಿಯ ಮತ್ತೊಂದು ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಶಾಸಕ ಸಿ.ಟಿ.ರವಿಯವರು ಬಿಜೆಪಿ ಜನಾರ್ಧನ ರೆಡ್ಡಿಯವರ ಮೇಲೆ ಅವಲಂಬಿತವಾಗಿ ರಾಜಕೀಯ ಮಾಡ್ತಾ ಇಲ್ಲ. ಅವರ ಮೇಲೆ ಮೊಕದ್ದಮೆ ದಾಖಲಾದ ನಂತರ ಪಾರ್ಟಿ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೂ ಅವರ ಪಾತ್ರವಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಅವರ ಪಾತ್ರವಿರಲಿಲ್ಲ. ಕಾಂಗ್ರೆಸ್ ಜೆಡಿಎಸ್ ನವರು ಜನಾರ್ಧನ ರೆಡ್ಡಿಯವರಿಗೆ ಏನೋ ಮಾಡಿದ್ರಿಂದ ಬಿಜೆಪಿಯನ್ನು ಮಣಿಸುತ್ತೇವೆ ಅಂತಾ ಹೊಂಚು ಹಾಕಿದ್ರೆ, ಬಿಜೆಪಿ ಜನಾರ್ಧನ ರೆಡ್ಡಿಯವರ ಮೇಲೆ ಅಲಂಬಿತವಾಗಿರೋ ಪಾರ್ಟಿಯಲ್ಲ ಅಂತಾ ಅವರಿಗೆ ಅರ್ಥವಾಗುತ್ತೆ. ಪ್ರಕರಣದ ಹಿಂದೆ ಹೆದರಿಸುವ ಪಿತ್ತೂರಿ ಇರಬಹುದು. ಬಿಜೆಪಿಯನ್ನ ಮಣಿಸುವ ಕಾರಣಕ್ಕೆ ಜನಾರ್ಧನ ರೆಡ್ಡಿಯವರನ್ನ ಟಾರ್ಗೆಟ್ ಮಾಡಿದ್ರೆ ಅದು ಅವರಿಗೆ ಬಿಟ್ಟಿದ್ದು, ಅವರು ಎದುರಿಸುತ್ತಾರೆ ಎಂದಿದ್ದಾರೆ.