ಚಿಕ್ಕಮಗಳೂರು: ನಡೆದಾಡುವ ದೈವ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣ ಪೀಠಿಕೇಶ್ವರಿ ಮಠದ ಅವಧೂತ ವಿನಯ್ ಗುರೂಜಿಯವರನ್ನ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೈಂದೂರು ಎಂ.ಎಲ್.ಎ ಪ್ರಭಾಕರ್ ಶೆಟ್ಟಿ ಜೊತೆ ಆಗಮಿದಿದ್ದಾರೆ. 10.30ಕ್ಕೆ ಬಂದ ಬಿ ಎಸ್ ಯಡಿಯೂರಪ್ಪ ಅವರು 12.30ರ ತನಕ ಮೂರು ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ್ದಾರೆ. ವಿನಯ್ ಗುರೂಜಿ ನಡೆದಾಡುವ ದೈವ ಎಂದೇ ಖ್ಯಾತಿಯಾಗಿದ್ದು, ಇತ್ತೀಚೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಇವರ ಪಾದಪೂಜೆ ಮಾಡಿದ್ದರಿಂದ, ವಿನಯ್ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದಾರೆ .