ಚಿಕ್ಕಮಗಳೂರು:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ರೈತ ಮತ್ತು ಜನಸ್ನೇಹಿಯಾಗಿದೆ ಎಂದು ಯುವಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದ್ದಾರೆ.
ಕಳಸ ತಾಲ್ಲೂಕು ಘೋಷಣೆ ಮಾಡಿರುವುದು, ನಗರದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 50 ಕೋಟಿ ಹಣ ಒದಗಿಸಿರುವುದು, ಹಾಲಿನ ಸಹಾಯ ಧನವನ್ನು 6 ರೂಗೆ ಹೆಚ್ಚಿಸಿರುವುದು, ಭತ್ತ ಬೆಳೆಯುವ ರೈತರಿಗೆ ಏಳೂವರೆ ಸಾವಿರ ಮತ್ತು ಸಿರಿಧಾನ್ಯ ಬೆಳೆಯುವವರಿಗೆ 10 ಸಾವಿರ ಸಹಾಯ ಧನ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸವಿತಾ ಸಮಾಜದ ಅಭಿವೃದ್ದಿ ನಿಗಮ ಸ್ಥಾಪನೆ ಪ್ರಸ್ತಾಪಿಸುವ ಮೂಲಕ ಕೆಳಮಟ್ಟದ ಸಮುದಾಯಗಳ ಅಭಿವೃದ್ದಿಗೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ, ಅಲ್ಪಸಂಖ್ಯಾತರ ಅಭಿವೃದ್ದಿಗೆ 600 ಕೋಟಿ ರೂ ಮೀಸಲಿಡುವ ಮೂಲಕ ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿದಿದ್ದಾರೆ, ಕೃಷಿ ಅಭಿವೃದ್ದಿಗೆ 42.852 ಕೋಟಿ ಮೀಸಲಿಡುವ ಮೂಲಕ ರಾಜ್ಯದ ಅಭಿವೃದ್ದಿಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
Home ಸ್ಥಳಿಯ ಸುದ್ದಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ರೈತ ಮತ್ತು ಜನಸ್ನೇಹಿಯಾಗಿದೆ: ಕೆ.ವಿ.ಶಿವಕುಮಾರ್…










