ಚಿಕ್ಕಮಗಳೂರು ಕರವೇ ಯುವಸೇನೆ ವತಿಯಿಂದ ಪ್ರತಿಭಟನೆ.

726

ಚಿಕ್ಕಮಗಳೂರು – ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಕೂಗಿಗೆ ಆಕ್ರೋಶ ವ್ಯಕ್ತಪಡಿಸಿರೋ ಕಾಫಿನಾಡಿನ ಕನ್ನಡ ಪರ ಸಂಘಟನೆ ಹಾಗೂ ಸಾರ್ವಜನಿಕರು ಅಖಂಡ ಕರ್ನಾಟಕ ಒಂದೇ, ರಾಜ್ಯ ವಿಭಜನೆ ಬೇಡವೆಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು. ಕನ್ನಡಾಂಭೆ ಭುವನೇಶ್ವರಿಯ ಭಾವಚಿತ್ರದೊಂದಿಗೆ ವಿವಿಧ ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ನಗರದ ತಾಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ.ರಸ್ತೆಯಲ್ಲಿ ಸಾಗಿ ಆಜಾದ್ ಪಾರ್ಕ್ನಲ್ಲಿ ಕೊನೆಗೊಳಿಸಿದ್ದು. ರಾಜ್ಯ ವಿಭಜನೆಗೆ ನಮ್ಮ ವಿರೋಧವಿದ್ದು, ರಾಜ್ಯ ವಿಭಜಿಸಲು ಮುಂದಾದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.