ಚಿಕ್ಕಮಗಳೂರು : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದ್ದರೂ ಕೆಲವು ಭಾಗಗಳಲ್ಲಿ ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿ ಗುಂಪುಕಟ್ಟಿಕೊಂಡು ಮಾತನಾಡುವುದು, ಅನಗತ್ಯವಾಗಿ ರಸ್ತೆಯಲ್ಲಿ ಸುತ್ತಾಡುವುದನ್ನು ಜಾಸ್ತಿ ಮಾಡಿದ್ದಾರೆ. ಈ ನಡುವೆ ಜಿಲ್ಲೆಯ ಆಲ್ದೂರು ಸಮೀಪದ ಬನ್ನೂರಿನಲ್ಲಿ ಅಂಗಡಿ ಮುಂಭಾಗ ಸುಮಾರು 10 ಮಂದಿ ಗುಂಪುಕಟ್ಟಿ ಮಾತನಾಡುತ್ತಿದ್ದರು. ಈ ವೇಳೆ ಶೃಂಗೇರಿ ಕಡೆಗೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಹರೀಶ್ ಪಾಂಡೆ ಅವರು ಅಂಗಡಿ ಮುಂಭಾಗ ಕುಳಿತು ಮಾತನಾಡುತ್ತಿರುವವರನ್ನು ನೋಡಿ ಗಾಡಿಯನ್ನು ನಿಲ್ಲಿಸಿದ್ದು, ಈ ವೇಳೆ ಅಂಗಡಿ ಮುಂಭಾಗದಲ್ಲಿ ಕುಳಿತವರು ಪೊಲೀಸರನ್ನು ನೋಡಿ ಎದ್ನೋ ಬಿದ್ನೋ ಎಂದು ಓಡಿ ಹಂಚಿನ ಮನೆ ಹಾಗೂ ಶೀಟಿನ ಮನೆ ಮೇಲೆ ಕೂತಿದ್ದಾರೆ. ಬಳಿಕ ಪೊಲೀಸರು ಲಾಠಿ ಹಿಡಿದು ಎಷ್ಟೇ ಕೆಳಗೆ ಇಳಿಯುವಂತೆ ಕೇಳಿಕೊಂಡರು ಕೆಳಗೆ ಇಳಿದಿಲ್ಲ. ಬಳಿಕ ಅಧಿಕಾರಿಗಳು ತೆರಳಿದ ಬಳಿಕ ಪೊಲೀಸರು ಬಂದು ಮನೆ ಮೇಲೆ ಹತ್ತಿದ್ದ ಇಬ್ಬರನ್ನು ಕೆಳಗಿಳಿಸಿದ್ದು, ಬಳಿಕ ಅಂಗಡಿ ಮಾಲೀಕ ಸೇರಿ ಮೂವರ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಲಾಕ್‍ಡೌನ್ ಉಲ್ಲಂಘನೆ-ಪೊಲೀಸರನ್ನು ನೋಡಿ ಮನೆ ಮೇಲೆ ಹತ್ತಿ ಕುಳಿತ ಜನ-ಮೂವರ ವಿರುದ್ಧ ಪ್ರಕರಣ...










