ಸರ್ಕಾರದ ವಿರುದ್ಧ ಅವಹೇಳನ ಆರೋಪ : ಓರ್ವ ಬಂಧನ…

124
firstsuddi

ಮಂಗಳೂರು: ಕೊರೋನಾ ತಡೆಗಟ್ಟುವ ವಿಚಾರದಲ್ಲಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದಲ್ಲಿ ನಗರದ ಉಳಾಯಿಬೆಟ್ಟು ನಿವಾಸಿ ನಿಝಾಮ್ ಎಂಬುವವರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಈತ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19 ವಿಚಾರಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಈತನನ್ನು ಬಂಧಿಸಿದ ಬಗ್ಗೆ ವರದಿಯಾಗಿದೆ.