ಚಿಕ್ಕಮಗಳೂರು : ಟಿಪ್ಪರ್ ಲಾರಿವೊಂದು ವಿದ್ಯುತ್ ತಗುಲಿ ಹೊತ್ತಿ ಉರಿದ ಘಟನೆ ನಗರದ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ. ನೂತನವಾಗಿ ನಿರ್ಮಾಣ ವಾಗುತ್ತಿರುವ ಲೇಔಟ್ ಕಾಮಗಾರಿಗೆ ಟಿಪ್ಪರ್ ಲಾರಿ ಮೂಲಕ ಎಂ ಸ್ಯಾಂಡ್ ತರಲಾಗಿತ್ತು. ಈ ವೇಳೆ ಟಿಪ್ಪರ್ ಲಾರಿಯಿಂದ ಎಂ ಸ್ಯಾಂಡ್ ಲಿಫ್ಟ್ ಮಾಡುವಾಗ ವಿದ್ಯುತ್ ತಂತಿ ಟಿಪ್ಪರ್ ಗೆ ತಗುಲಿ ಬೆಂಕಿ ಅವಘಡ ಸಂಭವಿಸಿ ಟಿಪ್ಪರ್ ಲಾರಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಟಿಪ್ಪರ್ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದು, ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.









