ಚಿಕ್ಕಮಗಳೂರು : ನಗರದ ಹೌಸಿಂಗ್ ಬೋರ್ಡ್‍ನಲ್ಲಿರುವ ಶ್ರೀ ಮಂಜುನಾಥೇಶ್ವರ ವಿಧ್ಯಾಸಂಸ್ಥೆ ಇವರ ವತಿಯಿಂದ ಶಾಲಾ ಮಕ್ಕಳೀಗೆ ರಸಪ್ರಶ್ನೆ ಹಾಗು ಭಾವಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ವೇದಿಕೆಯಲ್ಲಿ ದೀಪ ಬೆಳಗುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಬಿ.ಜಿ.ಎಸ್ ಕಾಲೇಜು ಪ್ರಾಂಶುಪಾಲರಾದ ಶ್ರೀ ಜೆ.ಜಿ ಸುರೇಂದ್ರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯೋಪದ್ಯಾಯರಾದ ಶ್ರೀ ಸಿ,ಆರ್ ಚಂದ್ರಶೇಖರ್ ಅವರು ಮಾತನಾಡಿ ಮಕ್ಕಳು ಪಠ್ಯದ ಜೊತೆಗೆ ಇಂತಹ ಸಹಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ರಸಪ್ರಶ್ನೆ, ಗಾಯನ, ಅಭಿನಯ ಇಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದರಿಂದ ಮತ್ತು ವಿಧ್ಯಾರ್ಥಿಗಳು ಇವುಗಳಲ್ಲಿ ಪಾಲ್ಗೊಳುವುದರಿಂದ ಜ್ಞಾನವು ಮತ್ತಷ್ಟು ಹೆಚ್ಚುತ್ತದೆ. ಶಾಲೆಯ ಒಳಗೆ ಆಟ-ಪಾಠದ ಜೊತೆಗೆ ನಡೆಸುವ ಸ್ಪರ್ಧೆ, ತರಬೇತಿ, ಸಾಮಾಜಿಕ ಕಾರ್ಯಕ್ರಮಗಳು ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿ ಎಂದರು. ಅಲ್ಲದೆ ಮಕ್ಕಳಲ್ಲಿ ಅತೀ ಹೆಚ್ಚು ಹುರುಪನ್ನು, ಸ್ಪರ್ಧಾ ಮನೋಭಾವವನ್ನು ಇಂತಹ ಕಾರ್ಯಕ್ರಮಗಳು ಬೆಳೆಸುತ್ತವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಎಡ್. ಕಾಲೇಜಿನ ನಿವೃತ ಪ್ರಾಧ್ಯಾಪಕ ಎಸ್.ಪ್ರಕಾಶ್ ಮಾತನಾಡಿ ವಿಧ್ಯಾರ್ಥಿಗಳು ಶಾಲೆಯ ಅವದಿಯಿಂದಲ್ಲೆ ಉತ್ತಮ ಗುಣಗಳನ್ನು ಕಲಿಕೆಯ ಮನೋಭಾವವನ್ನು ಸಾಮಾಜಿಕ ಕಳಕಳಿಗಳನ್ನು ಬೆಳೆಸಿಕೊಳ್ಳಬೇಕು . ಕಲಿಕೆ ಹಾಗು ಪ್ರತಿಭೆ ತೋರಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಇವುಗಳ ಸದುಪಯೋಗವಾಗಬೇಕು ಎಂದು ನುಡಿದರು.
ಜೆ.ಜಿ ಸುರೇಂದ್ರ ಅವರು ಮಾತನಾಡಿ ವಿಧ್ಯಾರ್ಥಿಗಳು ಯಾವತ್ತು ಕೆಲ ವಿಷಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರಬೇಕು. ಜಾಗ್ರತೆ, ಶ್ರದ್ದೆ, ಪರಿಶ್ರಮ, ಉತ್ತಮ ನಡತೆ ಇವುಗಳಿಂದ ಉತ್ತಮ ವ್ಯಕ್ತಿಗಳಾಗುತ್ತಾರೆ. ತಮ್ಮ ಕಲಿಕೆಯ ಅವಧಿಯಲ್ಲಿ ಪರಿಶ್ರಮ ಪಟ್ಟು ಕಲಿತರೆ ಹಾಗು ಶಾಲೆಯಲ್ಲಿ ನಡೆಯುವ ಎಲ್ಲಾ ಉಪಯುಕ್ತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮುಂದುವರೆದರೆ ಮಾತ್ರ ಇಂತಹ ಕಾರ್ಯಕ್ರಮಗಳು ಸದುಪಯೋಗವಾಗುತ್ತದೆ ಎಂದವರು ನುಡಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಹಂತದ ರಸಪ್ರಶ್ನೆ. ಗಾಯನ, ಭಾವಗೀತೆ ಸ್ಪರ್ಧೆಗಳು ನಡೆದ್ದವು. ಬಿ.ಜಿ.ಎಸ್ ಸಮೂಹ ಸಂಸ್ಥೆಗಳ ಸಂಯೋಜಕರಾದ ಎಸ್.ಆರ್ ವೈದ್ಯ, ಮುರಾಜಿ ದೇಸಾಯಿ ಉಪನ್ಯಾಸಕರಾದ ಶ್ರೀ ವಿಜಯಕುಮಾರ್, ನೂರಾರು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಚಂದನ ಸ್ವಾಗತಿಸಿ ಪ್ರೀತಂ ವಂದಿಸಿದ್ದರು.










