ಎಸ್‌ಪಿ ಮನೆಯ ಎದುರೇ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ…

252
firstsuddi

ಬಾಗಲಕೋಟೆ:  ಎಸ್‌ಪಿ ಮನೆಯ ಎದುರೇ ಪೇದೆಯೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.   ಮಂಜು ಹರಿಜನ (28) ಆತ್ಮಹತ್ಯೆ ಮಾಡಿಕೊಂಡ ಪೇದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ನಿವಾಸಿ ಎನ್ನಲಾಗಿದ್ದು, 2012 ನೇ ಬ್ಯಾಚ್​ನಲ್ಲಿ ಪೇದೆಯಾಗಿ ನೇಮಕವಾಗಿದ್ದರು.  ಕಳೆದ ಒಂದೂವರೆ ವರ್ಷದಿಂದ ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದು,  ಇಂದು ಎಸ್ ಪಿ  ಸಿ‌.ಬಿ. ರಿಷ್ಯಂತ್  ಅವರ  ಮನೆಯ ಎದುರೇ ಕರ್ತವ್ಯಕ್ಕೆ ನೀಡಿದ್ದ ರೈಫಲ್ 303 ರಿಂದ ತಲೆಗೆ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮಾಡಿಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ.