ನಾನು ಚಿತ್ರರಂಗದಿಂದಲೇ ಬಂದೋನು. ಯಾರೇ ಬಂದು ಪ್ರಚಾರ ಮಾಡಿದ್ರು ನನಗೇನು ಆಂತಕವಿಲ್ಲ :ಸಿಎಂ ಕುಮಾರಸ್ವಾಮಿ…

180
firstsuddi

ಚಿಕ್ಕಮಗಳೂರು : ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅದು ಗೊತ್ತಿರೋ ವಿಷಯವೇ. ಅವರಿಗೆ ಎಲ್ಲರ ಬೆಂಬಲ ಇದೆ. ಯಾರು ಬೇಕಾಂದ್ರು ಚುನಾವಣೆಗೆ ನಿಲ್ಲಬಹುದು. ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಸಂತೋಷ . ಪ್ರತಿಯೊಬ್ಬರಿಗೂ ದೇಶದಲ್ಲಿ ಸ್ಪರ್ಧಿಸೋಕೆ ಅವಕಾಶ ಇದೆ. ಈಗಾಲಾದ್ರು ಜನಕ್ಕಾಗಿ ಬಂದಿದ್ದರಲ್ಲ. ಜನಕ್ಕೆ ಬಂದಿದ್ದೇನೆ ಅಂತಾ ಹೇಳಿದ್ದರಲ್ಲ, ಮಂಡ್ಯದಲ್ಲಿ ಎಲ್ಲಾ ರೀತಿಯ ಪ್ರಚಾರ ನಡೆಯುತ್ತಿದೆ. ಇದು ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ಎಲ್ಲಾ ನಟರು ದಾಳಿ ಇಟ್ಟರು ಪರವಾಗಿಲ್ಲ. ಎಲ್ಲಾ ಚಿತ್ರರಂಗದ ನಟರು ಬಂದು ದಾಳಿ ಇಟ್ಟರು ನನಗೇನೂ ಆತಂಕ ಇಲ್ಲ. ನಾನು ಕಾಣದೆ ಇರೋ ಚಿತ್ರ ನಟರೇನೂ ಅಲ್ಲ. ನಾನು ಚಿತ್ರರಂಗದಿಂದಲೇ ಬಂದೋನು. ಯಾರೇ ಬಂದು ಪ್ರಚಾರ ಮಾಡಿದ್ರು ನನಗೇನು ಆಂತಕವಿಲ್ಲ ಎಂದಿದ್ದಾರೆ.