ಸಿಎಂ ಸಿದ್ದರಾಮಯ್ಯ ಸರ್ಕಾರದ ಕೊನೆಯ ಬಜೆಟ್ : ಕಂದಾಯ ಇಲಾಖೆಗೆ ಸಿಕ್ಕಿದ್ದೇನು ?

723

ಹವಾಮಾನ ಮುನ್ಸೂಚನೆಗೆ ಆ್ಯಪ್ ಕಂದಾಯ ಇಲಾಖೆಗೆ ಬಜೆಟ್ನಲ್ಲಿ 6642 ಕೋಟಿ ಅನುದಾನ

ವಾಸ ಪ್ರಮಾಣ ಪತ್ರಗಳನ್ನು ತಕ್ಷಣವೇ ನೀಡಲು ‘ಈ ಕ್ಷಣ’ ಯೋಜನೆ

ಭೂ ಮಾಪನಾ ಇಲಾಖೆ ವತಿಯಿಂದ ಐದು ಮೊಬೈಲ್ ಆ್ಯಪ್ ಗಳ ಅಭಿವೃದ್ಧಿ

ಮೂರು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಲ್ಯಾಂಡ್ ಟೈಟಲಿಂಗ್ ಯೋಜನೆ

ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ 2500 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗುವುದು

ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಗಳ ಪಿಂಚಣಿ ಮೊತ್ತ 500 ರಿಂದ 600ಕ್ಕೆ ಏರಿಕೆ, ಇದರಿಂದ 48 ಲಕ್ಷ ಫಲಾನುಭವಿಗಳಿಗೆ ಅನುಕೂಲ

576 ಕೋಟಿ ವೆಚ್ಚ ರುದ್ರಭೂಮಿಗಳಿಗೆ ಜಮೀನು ಖರೀದಿ ಮಾಡಲು 10 ಕೋಟಿ

ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಾಫಿ ಬೆಳೆದಿರುವವರಿಗೆ 10 ಎಕರೆವರೆಗೆ ಗುತ್ತಿಗೆ ನೀಡಲು ನಿಯಮ

ಕಾವೇರಿ ತಂತ್ರಾಂಶವನ್ನು ಬಿಬಿಎಂಪಿಯ ಜಿಐಎಸ್ ಡಾಟಾ ಬೇಸ್ ಜೊತೆ ಸಂಯೋಜನೆಗೆ 3 ಕೋಟಿ

ಹವಾಮಾನ ಮುನ್ಸೂಚನೆ ಮತ್ತು ಸಿಡಿಲು ಮುನ್ನೆಚ್ಚರಿಕೆ ನೀಡಲು ಮೊಬೈಲ್ ಆ್ಯಪ್ ಅಭಿವೃದ್ಧಿ

ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಶನ ಮಾಡಲು 20 ಕೋಟಿ

ತಿರುಮಲದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ