ಶುಕ್ರವಾರ ಚಿಕ್ಕಮಗಳೂರಲ್ಲಿ ಸತ್ಯಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಸಿಎಂ

826

ಚಿಕ್ಕಮಗಳೂರು :  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಜ. ೦೫ ರಂದು ಸಂಜೆ ೪.೦೦ ಕ್ಕೆ ಅಜ್ಜಂಪುರದ ಶೆಟ್ರುಸಿದ್ದಪ್ಪ ಕ್ರೀಡಾಂಗಣದಲ್ಲಿ ನೆರವೇರಿಸಲಿದ್ದಾರೆ.

ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ. ನಗರಾಭಿವೃದ್ಧಿ ಮತ್ತು ಹಜ್ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ರೋಷನ್ ಬೇಗ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಹೆಚ್. ಶ್ರೀನಿವಾಸ್ ವಹಿಸಲಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಜೀವಿ ವೈವಿಧ್ಯ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಸಚಿವ ಹೆಚ್. ಕೆ. ಪಾಟೀಲ್, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಬಿ. ಪಾಟೀಲ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಅಲ್ಪ ಸಂಖ್ಯಾತರ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಬಿ. ಖಂಡ್ರೆ, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಚೈತ್ರಶ್ರೀ, ಸಂಸದೆ ಕು. ಶೋಭಾ ಕರಂದ್ಲಾಜೆ, ಸಂಸದ ಜೈರಾಮ್ ರಮೇಶ್, ಶಾಸಕರುಗಳಾದ ಸಿ.ಟಿ. ರವಿ, ಡಿ.ಎನ್.ಜೀವರಾಜ್, ಬಿ.ಬಿ. ನಿಂಗಯ್ಯ, ವೈ.ಎಸ್.ವಿ. ದತ್ತ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀಮತಿ ಮೋಟಮ್ಮ, ಎಂ.ಕೆ. ಪ್ರಾಣೇಶ್, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್ ಮಹೇಶ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಪಿ.ಮೋಹನ್, ತರೀಕೆರೆ ಪುರ ಸಭೆ ಅಧ್ಯಕ್ಷ ಟಿ.ಜಿ. ಅಶೋಕ್ ಕುಮಾರ್, ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಯವರಿಂದ ತರೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ

ಶಂಕುಸ್ಥಾಪನೆ:                          ಅಂದಾಜು ಮೊತ್ತ ರೂ.ಲಕ್ಷಗಳಲ್ಲಿ

೧. ಜಲಸಂಪನ್ಮೂಲ ಇಲಾಖೆ – ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಟರ್ನ್ ಕೀ ಆಧಾರದ ಪ್ಯಾಕೇಜ್ ೨ರ ಕಾಮಗಾರಿ    ೫೨೯೦೦.೦೦

೨. ಜಲಸಂಪನ್ಮೂಲ ಇಲಾಖೆ – ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಟರ್ನ್ ಕೀ ಆಧಾರದ ಪ್ಯಾಕೇಜ್ ೧ರ ಕಾಮಗಾರಿ    ೨೯೩೦೦.೦೦

೩. ಜಲಸಂಪನ್ಮೂಲ ಇಲಾಖೆ – ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಕಿ.ಮೀ. ೦.೦೦ ರಿಂದ ೧೬.೦೦ ವರೆಗೆ ಕಾಲುವೆ ನಿರ್ಮಾಣ    ೧೫೭೯೪.೦೦

೪. ಜಲಸಂಪನ್ಮೂಲ ಇಲಾಖೆ – ತುಮಕೂರು ಶಾಖಾ ಕಾಲುವೆಯ ೧೦.೦೦ ಕಿಮೀ ರಿಂದ ೩೦.೦೦ ಕಿ.ಮೀ ವರೆಗೆ ಟಿ.ಬಿ.ಸಿ ಪ್ಯಾಕೇಜ್ ೨ರ ಕಾಮಗಾರಿ    ೧೦೮೦೨.೦೦

೫. ಜಲಸಂಪನ್ಮೂಲ ಇಲಾಖೆ – ತುಮಕೂರು ಶಾಖಾ ಕಾಲುವೆಯ ೦.೦೦ ಕಿಮೀ ರಿಂದ ೧೦.೦೦ ಕಿ.ಮೀ ವರೆಗೆ ಟಿ.ಬಿ.ಸಿ ಪ್ಯಾಕೇಜ್ ೧ರ ಕಾಮಗಾರಿ    ೬೯೫೪.೦೦

೬. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳು    ೨೮೩೬.೪೯

೭. ಪಂಚಾಯತ್ ರಾಜ್ ಇಲಾಖೆ – ೩೪೫೪ ಲಂಪ್-ಸಮ್ ಅನುದಾನದಡಿ ಗ್ರಾಮೀಣ ರಸ್ತೆ ಕಾಮಗಾರಿಗಳು     ೧೦೭೫.೦೦

೮. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ – ತರೀಕೆರೆ ತಾಲ್ಲೂಕಿನ ೧೪ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ    ೬೮೨.೪೯

೯. ನಗರಾಭಿವೃದ್ಧಿ ಇಲಾಖೆ – ತರೀಕೆರೆ ಪುರಸಭಾ ವ್ಯಾಪ್ತಿಯ ಮಾನ್ಯ ಮುಖ್ಯಮಂತ್ರಿಗಳ ೩ನೇ ಹಂತದ ನಗರೋತ್ಥಾನ ಕಾಮಗಾರಿಗಳು    ೬೩೭.೫೦

೧೦. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ –  ತರೀಕೆರೆ ತಾಲ್ಲೂಕು ವ್ಯಾಪ್ತಿಯ (ಸಂಖ್ಯೆ ೨೯) ಸಿ.ಸಿ. ರಸ್ತೆ ಕಾಮಗಾರಿ    ೩೯೧.೦೦

೧೧. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ     ೩೨೬.೩೨

೧೨. ಮೆಸ್ಕಾಂ ಇಲಾಖೆ-ಅಜ್ಜಂಪುರ ಮೆಸ್ಕಾಂ ಉಪವಿಭಾಗದ ಕಛೇರಿ ಕಟ್ಟಡ    ೧೧೦.೦೦

೧೩. ಮೆಸ್ಕಾಂ ಇಲಾಖೆ – ತರೀಕೆರೆ ಶಾಖೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಫೀಡರ್ ಅನ್ನು ವಿಭಜಿಸಿ ೨ ಹೊಸ ೧೧ ಕೆವಿ. ಮಾರ್ಗ ರಚನೆ    ೯೬.೯೮

೧೪. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ – ತರೀಕೆರೆ ತಾಲ್ಲೂಕು ಅಮೃತಾಪುರ, ಅಜ್ಜಂಪುರ ಮತ್ತು ಶಿವನಿ ಹೋಬಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಸಾರ್ವಜನಿಕ ಸಮುದಾಯ ಭವನಗಳು    ೭೦.೦೦

೧೫. ಸಮಾಜ ಕಲ್ಯಾಣ ಇಲಾಖೆ – ಅಂಬೇಡ್ಕರ್ ಭವನ ಕಟ್ಟಡ. ಲಿಂಗದಹಳ್ಳಿ    ೫೦.೦೦

೧೬. ಅರಣ್ಯ ಇಲಾಖೆ – ಅಜ್ಜಂಪುರ ವಲಯ ಅರಣ್ಯಾಧಿಕಾರಿಗಳ ಕಛೇರಿ ಕಾಮಗಾರಿ    ೨೫.೦೦

೧೭. ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು – ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಕಟ್ಟಡ, ತರೀಕೆರೆ ಪಟ್ಟಣ     ೧೬.೭೦

೧೮. ಸಮಗ್ರ ಗಿರಿಜನ ಕಲ್ಯಾಣ ಇಲಾಖೆ – ಪರಿಶಿಷ್ಟ ಪಂಗಡ ಕಾಲೋನಿಗೆ ಸಮುದಾಯ ಭವನ. ಭೂತನಹಳ್ಳಿ    ೧೦.೦೦

ಒಟ್ಟು    ೧೨೨೦೭೭.೪೮

ಉದ್ಘಾಟನೆ :

೧. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ – ತರೀಕೆರೆ ಧರ್ಮಾಪುರ ರಸ್ತೆ ಎಸ್.ಹೆಚ್. ೨೪ ಸರಪಳಿ ೦.೦೦ ರಿಂದ ೩೩.೩೦ ಕಿ. ಮೀ ವರೆಗೆ ರಸ್ತೆ ಅಭಿವೃದ್ಧಿ ೧೬೦೦.೦೦

೨. ಮೆಸ್ಕಾಂ ಇಲಾಖೆ – ದುಗ್ಲಾಪುರ ಗ್ರಾಮದ ೨*೮ ಎಂವಿಎ ೬೬/೧೧ ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಮತ್ತು ೦.೨೯೫ಕಿ.ಮೀ ಉದ್ದದ ೬೬ಕೆವಿ ವಿಮುಖ ಮಾರ್ಗ ರಚನೆ    ೬೪೭.೪೧

೩. ನಗರಾಭಿವೃದ್ಧಿ ಇಲಾಖೆ – ೨೦೧೫-೧೬ನೇ ಸಾಲಿನ ವಿಶೇಷ ಅನುದಾನದಲ್ಲಿ ತರೀಕೆರೆ ಪುರಸಭೆ ವ್ಯಾಪ್ತಿಯ ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು    ೩೦೦.೦೦

೪. ನಗರಾಭಿವೃದ್ಧಿ ಇಲಾಖೆ – ೨೦೧೭-೧೮ನೇ ಸಾಲಿನ ೧೪ನೇ ಹಣಕಾಸು ಆಯೋಗದ ಜನರಲ್ ಬೇಸಿಕ್ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳು     ೧೫೪.೬೭

೫. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ಪ್ರಾಥಮಿಕ ಆರೋಗ್ಯ ಕೇಂದ್ರ ನವೀಕರಣ ಕಾಮಗಾರಿ. ಬುಕ್ಕಾಂಬುದಿ    ೯೦.೧೫

೬. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ತರೀಕೆರೆ ಸಾರ್ವಜನಿಕ ಆಸ್ಪತ್ರೆಯ ನೂತನ ಐ.ಸಿ.ಯು ಮತ್ತು ಡಿಜಿಟಲ್ ಎಕ್ಸ್ ರೇ ಘಟಕ    ೭೭.೦೦

೭. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – ಸಾಮರ್ಥ್ಯಸೌಧ ಕಟ್ಟಡ ನಿರ್ಮಾಣ, ತಾಲ್ಲೂಕು ಪಂಚಾಯಿತಿ, ತರೀಕೆರೆ    ೬೫.೫೭

೮. ಮೆಸ್ಕಾಂ ಇಲಾಖೆ – ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ, ತರೀಕೆರೆ ಉಪವಿಭಾಗ    ೫೦.೦೦

೯. ಮೆಸ್ಕಾಂ ಇಲಾಖೆ – ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ೬೬/೧೧ ಕೆವಿ ಉಪಕೇಂದ್ರದಿಂದ ೧೧ಕೆವಿ ಎಫ್-೬ ಹುಲಿತಿಮ್ಮಾಪುರ ಫೀಡರ್‌ಗೆ ಹೆಚ್ಚುವರಿಯಾಗಿ ಎಫ್-೧೦ ಧೂಪದಕಾನ್ ಫೀಡರ್ ನಿರ್ಮಾಣ    ೪೦.೪೦

೧೦. ಕೃಷಿ ಇಲಾಖೆ – ಕಸಬಾ ರೈತ ಸಂಪರ್ಕ ಕೇಂದ್ರ    ೩೮.೦೦

೧೧. ಸಮಾಜ ಕಲ್ಯಾಣ ಇಲಾಖೆ – ಜಗಜೀವನರಾಂ ಭವನ ನಿರ್ಮಾಣ, ಪಿರುಮೇನಹಳ್ಳಿ, ಸುಣ್ಣದಹಳ್ಳಿ ಹಾಗೂ ಎಂ.ಸಿ. ಹಳ್ಳಿ ಎ.ಕೆ. ಕಾಲೋನಿ    ೩೦.೦೦

೧೨. ಸಮಾಜ ಕಲ್ಯಾಣ ಇಲಾಖೆ – ಸಮುದಾಯ ಭವನ ಕಟ್ಟಡ – ಹಣ್ಣೆ ಹಾಗೂ ಸೊಕ್ಕೆ.    ೨೦.೦೦

೧೩. ಪಶುಪಾಲನೆ ಇಲಾಖೆ – ಪ್ರಾಥಮಿಕ ಪಶು ಚಿಕಿತ್ಸಾಲಯ ಕಟ್ಟಡ. ನಂದಿ ಗ್ರಾಮ    ೧೮.೭೮

೧೪. ಮೆಸ್ಕಾಂ ಇಲಾಖೆ – ದುಗ್ಲಾಪುರ ೬೬/೧೧ಕೆವಿ ವಿವಿ ಕೇಂದ್ರದಿಂದ ಮಾರುತಿನಗರದ ವರೆಗೆ ೨ ಪ್ರತ್ಯೇಕ ೧೧ ಕೆವಿ ಮಾರ್ಗಗಳನ್ನು ರಚಿಸಿ ಸದರಿ ಫೀಡರ್ ವಿಭಜನೆ    ೧೭.೩೮

೧೫. ಮೆಸ್ಕಾಂ ಇಲಾಖೆ – ದುಗ್ಲಾಪುರ ವಿವಿ ಕೇಂದ್ರದಿಂದ ಸೀತಾಪುರಕಾವಲ್ ವರೆಗೆ ೧೧ ಕೆವಿ ಜೋಡಿ ಮಾರ್ಗರಚಿಸಿ ಸದರಿ ಎಫ್-೬ ಫೀಡರ್‌ನ್ನು ವಿಭಜಿಸಿ ೨ ಹೊಸ ೧೧ ಕೆವಿ ಮಾರ್ಗರಚಿಸುವುದು.    ೧೭.೨೫

೧೬. ಶಿಕ್ಷಣ ಇಲಾಖೆ -ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಒಂದು ಹೊಸ ಕೊಠಡಿ. ಅಜ್ಜಂಪುರ    ೧೦.೦೦

೧೭. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ – ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯಲ್ಲಿ ಎರಡು ಹೆಚ್ಚುವರಿ ಕಟ್ಟಡ. ಬಿಲ್ಲೇಹಳ್ಳಿ    ೧೦.೦೦

೧೮. ಸಮಾಜ ಕಲ್ಯಾಣ ಇಲಾಖೆ – ಅಂಬೇಡ್ಕರ್ ಭವನ ಕಟ್ಟಡ. ಸಂತೆವೇರಿ ವಿದ್ಯಾನಗರ ಬಡಾವಣೆ    ೯.೩೮

ಒಟ್ಟು    ೩೧೯೫.೯೯