ಮೂಡಿಗೆರೆ ಸಬ್ ಇನ್ಸ್‍ಪೆಕ್ಟರ್ ರಫೀಕ್‍ಗೆ ವಾರ್ಷಿಕ ಪೊಲೀಸ್ ಪ್ರಶಸ್ತಿ

1197

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಠಾಣೆಯ ಸಬ್ ಇನ್ಸ್‍ಪೆಕ್ಟರ್ ರಫೀಕ್‍ಗೆ ಜಿಲ್ಲೆಯ ಅತ್ಯತ್ತಮ ಪೊಲೀಸ್ ಎಂದು ವಾರ್ಷಿಕ ಪೊಲೀಸ್ ಪ್ರಶಸ್ತಿ ಲಭ್ಯವಾಗಿದೆ. ನಿನ್ನೆ ಎಸ್.ಪಿ. ಅಣ್ಣಾಮಲೈಗೆ ಹೊಸ ವರ್ಷದ ಶುಭಾಷಯ ಹೇಳಲು ಎಲ್ಲಾ ಠಾಣೆಯ ಸಬ್ ಇನ್ಸ್‍ಪೆಕ್ಟರ್‍ಗಳು ಆಗಮಿಸಿದ್ರು. ಈ ವೇಳೆ, ಎಸ್ಪಿ ಅಣ್ಣಾಮಲೈ ಮೂಡಿಗೆರೆಯ ರಫೀಕ್ ಜಿಲ್ಲೆಯಲ್ಲಿ ನೀವೇ ಅತ್ಯುತ್ತಮ ಪೊಲೀಸ್ ಎಂದು ಶಾಕ್ ನೀಡುವ ಮೂಲಕ ಶುಭಾಷಯ ಕೋರಿದ್ದಾರೆ. ಸುಮಾರು ಒಂದು ವರ್ಷಗಳಿಂದ ಮೂಡಿಗೆರೆಯಲ್ಲಿ ಕಾರ್ಯನಿರ್ವಹಿಸ್ತಿರೋ ರಫೀಕ್ ಜನಮೆಚ್ಚುಗೆಯ ಸಬ್‍ಇನ್ಸ್‍ಪೆಕ್ಟರ್ ಆಗಿದ್ದಾರೆ. ಜಿಲ್ಲೆಯ 28 ಠಾಣೆಗಳ ಸಬ್ ಇನ್‍ಪೆಕ್ಟರ್ ಕೂಡ ರೇಸಿನಲ್ಲಿದ್ದು, ಕೊನೆಗೆ 2017ರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಎಂಬ ಪಾತ್ರಕ್ಕೆ ಗುರಿಯಾಗಿದ್ದಾರೆ. ಮೂಡಿಗೆರೆ ಠಾಣೆಯ ಸಿಬ್ಬಂದಿ ಕೂಡ ರಫೀಕ್‍ಗೆ ಶುಭಾಷಯ ಹೇಳಿದ್ದಾರೆ. ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ರಫೀಕ್, ಎಸ್ಪಿ ಸಾರ್ ಹೇಳಿದಾಗ ನನಗೂ ಆಶ್ಚರ್ಯವಾಯ್ತು. ಈ ಪ್ರಶಸ್ತಿ ಮತ್ತಷ್ಟು ಪ್ರಮಾಣಿಕವಾಗಿ ಹಾಗೂ ದಕ್ಷತೆಯಿಂದ ಕೆಲಸ ಮಾಡುವಂತೆ ನನ್ನನ್ನ ಉತ್ತೇಜಿಸಿದೆ ಎಂದು ಹೇಳಿದ್ದಾರೆ.