ಅಂತರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಕೆಸರುಗದ್ದೆ ಸ್ಪರ್ಧೆ…

1077
FIRSTSUDDI

ಕಳಸ ರೋಟರೀ ಕ್ಲಬ್,ಇನ್ನರ್ ವೀಲ್ ಹಾಗೂ ಎಡೂರು ಗ್ರಾಮಸ್ಥರ ಸಹಯೋಗದಲ್ಲಿ ಅಂತರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಒಂದು ದಿನ ಕೆಸರುಗದ್ದೆ ಸ್ಪರ್ಧೆ ಹಾಗೂ ಕೃಷಿ ಕ್ಷೇತ್ರ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎಡೂರಿನ ಕಿರಣ್ ಶೆಟ್ಟಿಯವರ ತೋಟ ಹಾಗೂ ಗದ್ದೆಯಲ್ಲಿ ಶನಿವಾರ ಹಿರೇಬೈಲಿನ ಸರ್ಕಾರಿ ಹಾಗೂ ಖಾಸಾಗಿ ಶಾಲೆಯ ಮಕ್ಕಳಿಗೆ ಈ ವಿನೂತನ ಕಾರ್ಯಕ್ರಮವನ್ನು ನಡೆಸಲಾಯಿತು.ಶಾಲಾ ಮಕ್ಕಳಿಗೆ ಜೇನು ಕೃಷಿಯ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಲಾಯಿತು.ನಂತರ ತೋಟದಲ್ಲಿ ಸಾವಯವ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆಸಿದ ತೋಟಗಳ ಪರಿಚಯ ಹಾಗೂ ಬೆಳೆದ ಬೆಳೆಯಲ್ಲಿ ಆಗುವ ವ್ಯತ್ಯಾಸಗಳ ಬಗ್ಗೆ ಮಕ್ಕಳಿಗೆ ತೋಟದ ಮಾಲಿಕರಾದ ಕಿರಣ್ ಶೆಟ್ಟಿ ವಿವರಣೆ ನೀಡಿದರು.ಅತ್ಯಲ್ಪ ತೋಟದಿಂದ ಯಾವ ರೀತಿ ಹೆಚ್ಚುವರಿ ಇಳುವರಿಯನ್ನು ಪಡೆಯಬಹುದು.ಹಾಗೂ ತಮ್ಮ ತೋಟದಲ್ಲಿ ಕೃಷಿಯ ಹೊಸ ಹೊಸ ಆವಿಸ್ಕಾರಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಣೆ ನೀಡಿದರು.ತಮ್ಮ ತೋಟದಲ್ಲಿ ಬೆಳೆದ ಕಾಫಿ,ಮೆಣಸು,ಅಡಕೆ,ರೂಬಟನ್,ಎಗ್ ಪ್ರೋಟ್,ಅಂಜೂರ,ಲೀಚಿ,ಚೆರಿ,ಸಫೋಟ,ಸೇಬು,ಮಾವು,ಪಣಿ ನೇರಳೆ,ಹಲಸು,ಇಂಗು,ಬೆಣ್ಣೆ ಹಣ್ಣು,ಸೀಬೆ,ಚಕೋತ,ದಾಳಿಂಬೆ,ನಿಂಬೆ ಹಣ್ಣು,ಸಿಂಗಾಪುರ ಚೆರಿ, ಮುಂತಾದ ಹಣ್ಣುಗಳು ಹಾಗೂ ಶ್ರೀಗಂಧ,ಅಗರ್‍ವುಡ್,ದಾಲ್ಚಿನಿ,ಇಂಗು,ಲವಂಗ,ಗೇರು ಮುಂತಾದಮರಗಳ ಪರಿಚಯವನ್ನು ಮಕ್ಕಳಿಗೆ ನೀಡಿದರು.ಮನೆಯಲ್ಲಿರುವ ವಿವಿದ ತಳಿಯ ಆಕರ್ಷಕ ಪುಷ್ಪಗಳನ್ನು ತೋರಿಸಲಾಯಿತು.ಯಾವುದೇ ವಿದ್ಯುತ್ ಹಾಗೂ ಯಂತ್ರದ ಸಹಾಯವಿಲ್ಲದೆ ನೈಸರ್ಗಿಕವಾಗಿ ಸಿಗುವ ನೀರನ್ನು ಗುರುತ್ವಾಕರ್ಷನೆಯ ಮೂಲಕ ತಮ್ಮ ಟ್ಯಾಂಕಿಗಳಿಗೆ ನೀರನ್ನು ಸರಭರಾಜು ಮಾಡುವ ಮಾರ್ಗೊಪಾಯವನ್ನು ಕಂಡುಕೊಂಡಿದ್ದಾರೆ ಈ ಆವಿಷ್ಕಾರವನ್ನು ಮಕ್ಕಳಿಗೆ ತೋರಿಸಲಾಯಿತು.ತೆಂಗಿನ ಮರವನ್ನು,ಹಾಗೂ ಅಡಕೆಮರವನ್ನು ಸುಲಭವಾಗಿ ಹತ್ತುವ ಸಾದನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.ನಂತರ ಮಕ್ಕಳಿಗೆ ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ,ಕಬಡ್ಡಿ, ಓಟ ವಿವಿದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ಮಕ್ಕಳು ಒಂದು ದಿನ ಪೂರ್ತಿ ಕೆಸರಿನಲ್ಲಿ ತಮ್ಮನ್ನು ತಾವು ಮೈಮರೆತು ಆಟ ಆಡಿ ಕುಣಿದು ಕುಪ್ಪಳಿಸಿದರು. ನೂರಾರು ಗ್ರಾಮಸ್ಥರು ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿ,ಮಕ್ಕಳೊಂದಿಗೆ ಬೆರೆತರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಕಿರಣ್ ಶೆಟ್ಟಿ, ಕಾರ್ಯದರ್ಶಿ ಕುಮಾರಸ್ವಾಮಿ,ಇನ್ನರ್‍ವೀಲ್ ಅಧ್ಯಕ್ಷೆ ಮಾಲಾ,ಶಿವರಾಮ ರಾಗೀಹಳ್ಳಿ,ಸುಗಮ,ಕುಮಾರ ಸ್ವಾಮಿ,ಸುಬ್ರಮಣ್ಯ,ವಿಜಯಕುಮಾರ್,ಆಶಿಕಾ,ಸವಿತ ಇತರರು ಇದ್ದರು.                                                                                                         ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದ ವಿದ್ಯಾರ್ಥಿ ಸ್ನೇಹ- ಸಾವಿರಾರು ರೂ ಖರ್ಚು ಮಾಡಿ ಎಲ್ಲೋ ದೇವಸ್ಥಾನನೋ ಇನ್ಯಾವುದೋ ಪ್ರಯೋಜನಕ್ಕೆ ಬಾರದ ಸ್ಥಳಗಳಿಗೆ ಪ್ರವಾಸ ಕರೆದುಕೊಂಡು ಹೋಗುವ ಬದಲು ಇಂತಹ ಕೃಷಿ ಬೆಳೆದಿರುವ ಉತ್ತಮ ಕೃಷಿಕರ ತೋಟಗಳಿಗೆ ಕರೆದುಕೊಂಡು ಹೋದರೆ ನಮಗೆ ಸಾಕಷ್ಟು ಪ್ರಯೋಜನಕಾರಿಯಾಗುತ್ತದೆ.ಜನಪದ ಕ್ರೀಡೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಕೆಸರು ಗದ್ದೆಯ ಮೂಲಕ ಜನಪದ ಕ್ರೀಡೆಗಳನ್ನು ಸವಿಯುವ ಅವಕಾಶ ನಮಗೆ ಸಿಕ್ಕಿದೆ ಎಂದರು.