ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ನಾಯಕನಾಗಿ ನಟಿಸಿರುವ ‘ಅಮರ್’ ಸಿನಿಮಾದ ಟೀಸರ್ ನಾಳೆ ಬಿಡುಗಡೆಯಾಗಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶುಭಾಶಯ ತಿಳಿಸಿದ್ದಾರೆ. ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಅಭಿಷೇಕ್ ಅವರ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ ಎಂದು ದರ್ಶನ್ ಅವರು ಟ್ವಿಟ್ ಮಾಡಿದ್ದಾರೆ.











