ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮದುವೆ ಫಿಕ್ಸ್…

509
firstsuddi

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಮದುವೆ ಕುರಿತು ಬಹಳಷ್ಟು ದಿನಗಳಿಂದ ಸಾಕಷ್ಟು ಊಹಾಪೋಹಗಳಿದ್ದು, ಇದೀಗ ಅಂತಿಮವಾಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ವಿವಾಹ ದಿನವನ್ನು ಘೋಷಿಸಿಕೊಳ್ಳುವ ಮೂಲಕ ಇದಕ್ಕೆ ಫುಲ್​​ಸ್ಟಾಪ್ ಹಾಕಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನವೆಂಬರ್ 14 ಮತ್ತು 15ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು  ಸ್ವತಃ ನಟಿ ದೀಪಿಕಾ ಪಡುಕೋಣೆ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ. ವಿವಾಹ ನಡೆಯುವ ಜಾಗದ ಬಗ್ಗೆ ವಿವರ ನೀಡಿಲ್ಲ.

firstsuddi