ದೇಶದ ಮೇಲೆ ಎದುರಾಳಿಗಳಿಂದ ದಾಳಿ ನಡೆದಾಗಲೆಲ್ಲ ಭಾರತ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತಲೇ ಬಂದಿದೆ:ಡಾ. ಜಿ ಪರಮೇಶ್ವರ್…

250
firstsuddi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಎದ್ದಿದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನ ಗೆಲ್ಲುತ್ತೇವೆ ಎಂದು ಬಿ.ಎಸ್‌ ಯಡಿಯೂರಪ್ಪ ಅವರು ನಿನ್ನೆ ಚಿತ್ರದುರ್ಗದಲ್ಲಿ ಹೇಳಿದ್ದರು. ಈ ಹೇಳಿಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಟ್ವಿಟ್ ಮಾಡಿದ್ದು,  ದೇಶದ ಮೇಲೆ ಎದುರಾಳಿಗಳಿಂದ ದಾಳಿ ನಡೆದಾಗಲೆಲ್ಲ ಭಾರತ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತಲೇ ಬಂದಿದೆ. ಆದರೆ ಯಾರೂ ಈಗಿನ ಬಿಜೆಪಿಯವರಂತೆ ಅದನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಯಡಿಯೂರಪ್ಪನವರ ಹೇಳಿಕೆ ಇದಕ್ಕೆ ಸಾಕ್ಷಿ.
ಇವರ ಅಧಿಕಾರ ದಾಹಕ್ಕೆ‌ ಸೇನೆ, ಸೈನಿಕರು, ಯುದ್ಧ ಎಲ್ಲ ಚುನಾವಣಾ ಪ್ರಚಾರದ ಸಾಧನಗಳಷ್ಟೇ!ಬಿಜೆಪಿಯ ಹಲವು ನಾಯಕರು ಹಾಗೂ ಬೆಂಬಲಿಗರ ತಂತ್ರಗಾರಿಕೆಯನ್ನು ಯಡಿಯೂರಪ್ಪನವರು ಮುಗ್ಧರಂತೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರಷ್ಟೇ. ಬಿಜೆಪಿಯವರ ಮನಸ್ಸುಗಳಲ್ಲಿರುವ ಈ ಕೀಳುಮಟ್ಟದ ಯೋಚನೆಯನ್ನು ಜನಕ್ಕೆ ತಿಳಿಸಿದ್ದಕ್ಕೆ ನಾವು ಯಡಿಯೂರಪ್ಪನವರಿಗೆ ಧನ್ಯವಾದ ಹೇಳಬೇಕು ಎಂದು ಟ್ವಿಟ್ ಮಾಡಿದ್ದಾರೆ .