ಶ್ರೀರಾಮಸೇನೆಯಿಂದ ಚಿಕ್ಕಮಗಳೂರಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ

454

ಚಿಕ್ಕಮಗಳೂರು : ಶ್ರೀರಾಮಸೇನೆ ನೇತೃತ್ವದಲ್ಲಿ ಇಂದಿನಿಂದ ಏಳು ದಿನಗಳ ಕಾಲ ನಡೆಯೋ ದತ್ತಮಾಲಾ ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಶ್ರೀರಾಮಸೇನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ಇಂದು ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಲಾಧಾರಣೆ ಮಾಡಿದ್ರು. ವಿಶೇಷ ಪೂಜೆ-ಹೋಮ-ಹವನ ನಡೆಸಿದ ಕಾರ್ಯಕರ್ತರು ಇಂದಿನಿಂದ ಏಳು ದಿನಗಳ ಕಾಲ ವೃತದಲ್ಲಿದ್ದು ಇದೇ 19ರಂದು ದತ್ತಪೀಠದಲ್ಲೂ ವಿಶೇಷ ಹೋಮ-ಹವನ, ಪೂಜೆ ನಡೆಸಲಿದ್ದಾರೆ. ದತ್ತಪೀಠ ಹಿಂದೂಗಳ ಪೀಠ ಎಂದು ರಾಷ್ಟ್ರದ ಗಮನ ಸೆಳೆಯಲು ಈ ಬಾರಿ ನಾಲ್ಕು ಅಖಾಡಗಳಿಂದ 50ಕ್ಕೂ ಹೆಚ್ಚು ನಾಗಾಸಾಧುಗಳು ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ದತ್ತಪೀಠ ಹಿಂದುಗಳ ಪೀಠ, ಸರ್ಕಾರ ಎಲ್ಲಾ ದಾಖಲಾತಿಗಳನ್ನ ಸಮಗ್ರವಾಗಿ ಪರಿಶೀಲಿಸಿ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಘೋಷಿಸಬೇಕೆಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಆಗ್ರಹಿಸಿದ್ದಾರೆ.

 

LEAVE A REPLY

Please enter your comment!
Please enter your name here