ಚಿಕ್ಕಮಗಳೂರು : ಪ್ರತಿಯೊಬ್ಬ ನಾಗರೀಕರು ಪ್ರಜಾಪ್ರಭುತ್ದ ವ್ಯವಸ್ಥೆಯಲ್ಲಿ ಕ್ರಿಯಾಶೀಲರಾಗಲು ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಉತ್ತಮ ನಾಯಕರುಗಳನ್ನು ಆಯ್ಕೆ ಮಾಡಿಕೊಳ್ಳುವುದು ಮಹತ್ವದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ. ನಗರದ ಸುಭಾಷ್‍ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರಿಗೆ ಮತದಾನ ಅರಿವು ಮೂಡಿಸಿ ಹಾಗೂವಿ.ವಿ ಪ್ಯಾಟ್ ಯಂತ್ರದ ಕುರಿತ ಪ್ರಾತ್ಯಕ್ಷಿಕೆಯನ್ನು ನೀಡಿ ಮಾತನಾಡುತ್ತಿದ್ದರು.
ದೇಶ ಸದೃಡಗೊಳ್ಳಬೇಕೆಂದರೆ ಉತ್ತಮ ಆಡಳಿತ ವ್ಯವಸ್ಥೆ ಬರಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕರು ಹೆಚ್ಚು ಹೆಚ್ಚು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಉತ್ತಮ ಜನ ಪ್ರತಿನಿಧಿಗಳನ್ನು ಚುನಾಯಿಸಬೇಕು, ಈ ಹೊಣೆ ನಿಮ್ಮ ಮೇಲೆ ಇದೆ ಎಂದ ಅವರು ಯಾವುದೇ ಆಸೆ ಆಮಿಷ ಹಾಗೂ ಒತ್ತಡಕ್ಕೆ ಒಳಗಾಗದೆ ಮತದಾನ ಮಾಡಬೇಕೆಂದರು. ಮತದಾನ ಮಾಡುವುದು ಪ್ರತಿಯೊಬ್ಬ ನಾಗರೀಕರ ಹಕ್ಕು, ಈ ಹಕ್ಕು ಜಾಗೃತಿಯಿಂದ ನಿರ್ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 18 ವರ್ಷ ತುಂಬಿದ ಯುವಕರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳದೇ ಇದ್ದಲ್ಲಿ ಏಪ್ರಿಲ್ 14 ರವರೆಗೆ ಸಮೀಪದ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಒದಗಿಸಿ ತಮ್ಮ ಹೆಸರನ್ನು ತಪ್ಪದೇ ನೊಂದಾಯಿಸಿಕೊಳ್ಳಬೇಕೆಂದರು.
ಚುನಾವಣೆಯಲ್ಲಿ ತಾವು ಯಾವ ಆಭ್ಯರ್ಥಿಗೆ ಮತದಾನ ಮಾಡಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮತಗಟ್ಟೆಗಳಲ್ಲಿನ ವಿದ್ಯುನ್ಮಾನ ಮತ ಯಂತ್ರದ ಜೂತೆಗೆ ಅಳವಡಿಸಲಾಗಿರುವ ವಿ.ವಿ.ಪ್ಯಾಟ್ ಯಂತ್ರದÀ ಸಹಾಯದಿಂದ ಏಳು ಸೆಕೆಂಡ್‍ಗಳ ಕಾಲ ವೀಕ್ಷಿಸಬಹುದಾಗಿದೆ ಎಂದರು. ಸಾರ್ವಜನಿಕರು ತಮ್ಮ ಅಣುಕು ಮತದಾನ ಮಾಡುವುದರ ಮೂಲಕ ತಾವು ಮತದಾನ ಮಾಡಿದ ಅಭ್ಯರ್ಥಿಯ ಮುದ್ರಿತ ದಾಖಲೆಯ ರೂಪವನ್ನು ವಿ.ವಿ.ಪ್ಯಾಟ್‍ನಲ್ಲಿ ವೀಕ್ಷಿಸಿ ಮತ ಯಂತ್ರದ ಬಗ್ಗೆ ಖಚಿತಪಡಿಸಿಕೊಂಡರು. ಈ ಸಂರ್ದಭದಲ್ಲಿ ಜಿ.ಪಂ.ಯೋಜನಾ ನಿರ್ದೇಶಕ ವಿಠಲ್ ಯುವ ಜನ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳ ಹುಲ್ಲಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.