ಚಿಕ್ಕಮಗಳೂರು: ವಿದ್ಯಾವಂತ ದಂಪತಿಗಳು ಅನ್ಯೋನ್ಯತೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ|| ಜಿ.ಭೀಮೇಶ್ವರ ಜೋಷಿ ಸಲಹೆ ಮಾಡಿದರು.
ಬ್ರಾಹ್ಮಣ ಮಹಾಸಭಾ, ಬ್ರಾಹ್ಮಣ ಸ್ವಯಂ ಸೇವಕ ಸಂಘ, ಸಪ್ತಪದಿ ಫೌಂಡೇಶನ್ ಮತ್ತು ಮಂಗಳ ಸೂತ್ರ ಪತ್ರಿಕೆ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ 2 ದಿನಗಳ ಕಾಲದ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವಜನತೆ ಪಾಶ್ಚಾತ್ಯ ಸಂಸ್ಕøತಿಯ ದಾಸರಾಗಿರುವುದರಿಂದಾಗಿ ವಿವಾಹ ವಿಚ್ಚೇದನ ಮತ್ತು ವೃದ್ದಾಶ್ರಮಗಳ ಸಂಖ್ಯೆ ಸಮಾಜದಲ್ಲಿ ದಿನೇದಿನೇ ಹೆಚ್ಚುತ್ತಿದೆ, ವಿದ್ಯಾವಂತರಲ್ಲೇ ವಿವಾಹ ವಿಚ್ಚೇದನಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದಿಸಿದರು.
ಇಂದಿನ ಯುವತಿಯರು ಐಎಎಸ್, ಐಪಿಎಸ್, ಡಾಕ್ಟರ್ ಮತ್ತು ಇಂಜಿನಿಯರ್ ವರಗಳನ್ನೇ ಅಪೇಕ್ಷಿಸುವುದನ್ನು ಬಿಡಬೇಕು, ನಗರವನ್ನು ಬಿಟ್ಟು ಗ್ರಾಮೀಣ ಭಾಗದತ್ತಲೂ ಮುಖಮಾಡಬೇಕು, ಕೃಷಿಕರು ಪುರೋಹಿತರು ಸೇರಿದಂತೆ ಉಳಿದ ಉದ್ಯೋಗಿಗಳತ್ತಲೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಟಿ.ಎಂ.ಕೃಷ್ಣಮೂರ್ತಿ ಮಾತನಾಡಿ ಬ್ರಾಹ್ಮಣ ಸಮುದಾಯದ ಹಿತದೃಷ್ಠಿಯಿಂದ ಇಂತಹ ಸಮಾವೇಶಗಳು ಹೆಚ್ಚು ನಡೆಯಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಷಿ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಅಶ್ವಿನ್, ಸಹಕಾರ್ಯದರ್ಶಿ ಗೋಪಾಲಕೃಷ್ಣ, ಖಜಾಂಚಿ ಹೆಚ್.ಆರ್.ಮೋಹನ್, ನಿರ್ದೇಶಕ ಸಿ.ಪ್ರಕಾಶ್, ಕಡೂರು ಮಹಾಸಭಾ ಅಧ್ಯಕ್ಷ ದ್ವಾರಕಾನಾಥ್, ಬ್ರಾಹ್ಮಣಾ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಶೇಷಾದ್ರಿ, ಸಪ್ತಪದಿ ಪೌಂಢೇಶನ್‍ನ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ವಿದ್ಯಾವಂತ ದಂಪತಿಗಳು ಅನ್ಯೋನ್ಯತೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು : ಡಾ|| ಜಿ.ಭೀಮೇಶ್ವರ ಜೋಷಿ…










