ಜೆಸಿಐಯಲ್ಲಿ ಸಿಗುವ ತರಬೇತಿಗಳು ಸಮಾಜಕ್ಕೆ ಒಬ್ಬ ಉತ್ತಮ ನಾಯಕನನ್ನು ಸೃಷ್ಟಿ ಮಾಡಬಲ್ಲದು:ಬಿ.ವಿ.ರವಿ ರೈ

230
firstsuddi

ಕಳಸ:ಮಾನವೀಯ ಗುಣ,ಶಿಸ್ತು ಹಾಗೂ ಕಾರ್ಯಕ್ರಮಗಳನ್ನು ರೂಪಿಸುವ ಎಲ್ಲಾ ಗುಣಗಳನ್ನು ಒಬ್ಬ ಜೆಸಿಐ ಸದಸ್ಯನಲ್ಲಿ ಕಾಣಬಹುದು ಎಂದು ಚಲನ ಚಿತ್ರ ನಿರ್ಮಾಪಕ ಬಿ.ವಿ.ರವಿ ರೈ ಹೇಳಿದರು.ಪಟ್ಟಣದ ಆಶೀರ್ವಾದ್ ಕಂಪರ್ಟ್ ನಲ್ಲಿ ಕಳಸ ಜೆಸಿಐ ಸಂಸ್ಥೆ ಆಯೋಜಿಸಿದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಜೆಸಿಐ ಯಲ್ಲಿ ಸಿಗುವ ತರಬೇತಿಗಳು ಈ ಸಮಾಜಕ್ಕೆ ಒಬ್ಬ ಉತ್ತಮ ನಾಯಕನನ್ನು ಸೃಷ್ಟಿ ಮಾಡಬಲ್ಲದು.ತನ್ನ ವ್ಯಕ್ತಿತ್ವದ ಬದಲಾವಣೆಯ ಜೊತೆಗೆ ಸಮಾಜದ ಒಳಿತಿಗಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ.ತಾನು ಎಷ್ಟು ವರ್ಷ ಬದುಕಿದ್ದೇನೆ ಅನ್ನುವುದಕ್ಕಿಂತ ತಾನು ಹೇಗೆ ಬದುಕಿದೆ,ಈ ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಜೆಸಿಐ ಯಿಂದ ಕಲಿಯಬಹುದು.ಮಾನವ ಜನ್ಮದಲ್ಲಿ ಹುಟ್ಟಿ ಮುಂದೊಂದು ದಿನ ಮಣ್ಣಲ್ಲಿ ಮಣ್ಣಾಗುವ ಬದಲು ಈ ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದು ಹೇಳಿದರು.
ಜೆಸಿಐ ವಲಯ 14ರ ಅಧ್ಯಕ್ಷ ಜೆಫಿನ್ ಜಾಯ್ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.ನಿರ್ಗಮಿತ ಅಧ್ಯಕ್ಷ ಸಿ.ಚಂದ್ರಪ್ಪ ಅವರಿಂದ ನೂತನ ಅಧ್ಯಕ್ಷ ಜಿ.ಪ್ರಕಾಶ್ ಕುಮಾರ್ ಮತ್ತು ನಿರ್ಗಮಿತ ಕಾರ್ಯದರ್ಶಿ ರಾಮಕುಮಾರ್ ಅವರಿಂದ ನೂತನ ಕಾರ್ಯಧರ್ಶಿ ಕೆ.ಸಿ.ಮಹೇಶ್ ಅಧಿಕಾರ ಸ್ವೀಕರಿಸಿದರು.ನೂತನ ಸದಸ್ಯರಿಗೆ ವಲಯ ಉಪಾಧ್ಯಕ್ಷ ಸೋಮೇಶ್ ಪ್ರಮಾಣ ವಚನ ಬೋದಿಸಿದರು.
ವಲಯ 14ರ ಪೂರ್ವ ವಲಯ ಉಪಾಧ್ಯಕ್ಷೆ ಸಮತಾ ಮಿಸ್ಕಿತ್,ಕಳಸ ರೋಟರಿ ಸಂಸ್ಥೆ ಅಧ್ಯಕ್ಷ ಕಿರಣ್ ಶೆಟ್ಟಿ,ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್,ಸ್ಥಾಪಕ ಅಧ್ಯಕ್ಷ ಜಗದೀಶ್ ನಾಯ್ಕ್,ಬಿ.ಕೆ.ಮಹೇಶ್ ಇತರರು ಇದ್ದರು.