ಬೆಳಗಾವಿ ಪಿಎಲ್‍ ಡಿ ಬ್ಯಾಂಕ್​ಗೆ ಇಂದು ಚುನಾವಣೆ…

334
firstsuddi

ಬೆಳಗಾವಿ: ಬೆಳಗಾವಿಯ ಪಿಎಲ್‍ ಡಿ ಬ್ಯಾಂಕ್‍ ನ ಅಧ್ಯಕ್ಷ,  ಉಪಾಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ. ಲಕ್ಷ್ಮಿ ಹೆಬ್ಬಾಳ್ಕರ್​ ಹಾಗೂ ಜಾರಕಿಹೊಳಿ ಸಹೋದರರ ಬಣಗಳ ನಡುವಿನ ಸೆಣಸಾಟದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತುಹಲಕ್ಕೆ ಕಾರಣವಾಗಿದೆ. ಬೆಳಗಾವಿಯ ತಹಶೀಲ್ದಾರ್ ಮಂಜುಳಾ ನಾಯಕ್​ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪಿಎಲ್‍ಡಿ ಬ್ಯಾಂಕ್ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ನೀಡಿದೆ.