ಮೂಡಿಗೆರೆ: ಬಣಕಲ್ ಸಮೀಪದ ಕೊಡೆಬೈಲ್ ಗ್ರಾಮದ ಮೋಹನ್‍ಗೌಡ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಭತ್ತದ ಗದ್ದೆಗೆಂದು ರೈತ ಮೋಹನ್‍ಗೌಡ ಮತ್ತು ವಿಶ್ವನಾಥ್ ಹೋಗಿದ್ದು ಈ ಸಂದರ್ಭದಲ್ಲಿ ಗದ್ದೆಯಲ್ಲಿದ್ದ ಕಾಡಾನೆಗಳ ಹಿಂಡು ಅಟ್ಟಿಸಿಕೊಂಡ ಬಂದಿದ್ದು ಓಡುವ ಸಂದರ್ಭದಲ್ಲಿ ಮೋಹನ್ ಗೌಡ ಅವರು ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ರೈತ ಮೋಹನ್‍ಗೌಡ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಗೆ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ಆಸ್ಪತ್ರೆಗೆ ಬೇಟಿ ನೀಡಿ ಮೋಹನ್ ಗೌಡ ಅವರ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈತರು, ಬಣಕಲ್, ಕೂಡಳ್ಳಿ, ಕೊಡೆಬೈಲ್, ಕೋಗಿಲೆ, ಮೂಲರಹಳ್ಳಿ ಭಾಗÀದಲ್ಲಿ ಹಲವು ದಿನಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದು ಕಾಫಿತೋಟಗಳಿಗೆ ನುಗ್ಗಿ ಕಾಫಿಗಿಡಗಳನ್ನು ಮುರಿದು ಹಾಕಿವೆ, ಅಡಿಕೆ ಬಾಳೆ ಗಿಡಗಳನ್ನು ನಜ್ಜುಗುಜ್ಜಾಗಿಸಿದೆ. ಭತ್ತದ ಗದ್ದೆಗಳಿಗೆ ನುಗ್ಗಿ ಭತ್ತದ ಸಸಿಗಳನ್ನು ತುಳಿದು ಹಾಕುತ್ತಿವೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಿ ಎಂದು ಅರಣ್ಯ ಸಂರಕ್ಷಣಾಧಿಕಾರಿವರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ಬಣಕಲ್ ಭಾಗದಲ್ಲಿ ಕಾಡಾನೆಗಳು ಭತ್ತದ ಗದ್ದೆಗಳು ಹಾಗೂ ತೋಟಗಳಿಗೆ ಬಂದು ಹಾನಿ ಮಾಡುತ್ತಿರುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾಡಾನೆಗಳನ್ನು ಕಾಡಿಗಟ್ಟಿದರೆ ಮತ್ತೆ ಮತ್ತೆ ನಾಡಿನತ್ತ ಮುಖ ಮಾಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಇಂದಿನಿಂದ ಕಾರ್ಯಾಚರಣೆ ಪ್ರಾರಂಭವಾಗಿದ್ದು ಕಾಡಾನೆಗಳನ್ನು ಕಾಡಿಗಟ್ಟಲಾಗುವುದು. ಕಾಡಾನೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಅನುಮತಿ ಬೇಕಾಗಿರುವುದರಿಂದ ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಈ ಸಂದರ್ಭದಲ್ಲಿ ರೈತರಾದ ಗೌತಮ್, ಅಭಿಲಾಷ್, ಆಧುನಿಕ್, ಅಕಿಲ್, ನಿಶಾಂತ್, ಅನುದೀಪ್, ರಮೇಶ್‍ಗೌಡ, ಅರಣ್ಯ ಸಿಬ್ಬಂದಿಗಳಾದ ಶಿವರಾಜ್, ಚೇತನ್, ಸುರೇಶ್, ಪೂರ್ಣೇಶ್, ಮುಂತಾದವರು ಇದ್ದರು.