ಯಾದಗಿರಿ- ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಕಳೆದ ಮೂರು ತಿಂಗಳಿಂದ ರೈತರ ಸಾಲಮನ್ನಾದ ವಿಚಾರ ಚರ್ಚೆಯಾಗುತ್ತಿದೆ ಆದರೆ ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ರಾಜ್ಯದ ಅಭಿವೃದ್ದಿ ಸ್ಥಗಿತವಾಗಿದ್ದು, ಸುಮಾರು 13 ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು,ಇದರಿಂದ ಬರಗಾಲದ ಛಾಯೆ ಆವರಿಸಿದ್ದು,ಇದರ ಬಗ್ಗೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಯಾಗಲಿ, ಸಚಿವರಾಗಲಿ ಭೇಟಿ ನೀಡಿ ವಿಚಾರಿಸಿಲ್ಲ, ಎಂದು ಯಾದಗಿರಿಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.