ಸ್ಕೂಲ್ ಬಸ್ ಹರಿದು 2 ವರ್ಷದ ಹೆಣ್ಣು ಮಗು ಸಾವು…

603
firstsuddi

ಹಾಸನ- ಸ್ಕೂಲ್ ಬಸ್ ಹರಿದು ಎರಡು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಯಕಶೆಟ್ಟಿಹಳ್ಳಿಯಲ್ಲಿ ನಡೆದಿದ್ದು, ರಮೇಶ್ ಹಾಗೂ ನಂದಿನಿ ದಂಪತಿಯ ಪುತ್ರಿ ಚರಣ್ಯ(2) ಸೋದರನ ಜೊತೆ ಸ್ಕೂಲ್ ವ್ಯಾನ್ ಬಳಿ ಬಂದಿದ್ದಳು,ಸೋದರ ಸ್ಕೂಲ್ ವ್ಯಾನ್ ಹತ್ತುವಾಗ ಚರಣ್ಯ ಮುಂದಕ್ಕೆ ತೆರಳಿದ್ದು ಇದನ್ನು ಗಮನಿಸದ ಚಾಲಕ ವ್ಯಾನ್ ನನ್ನು ಮುಂದಕ್ಕೆ ಚಲಾಯಿಸಿದ್ದು,ಚರಣ್ಯ  ವ್ಯಾನ್‌ನ ಚಕ್ರಕ್ಕೆ ಸಿಲುಕಿ  ಮೃತಪಟ್ಟಿರುವ ಘಟನೆ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.