ರಾಯಚೂರು- ಸಾಲಮನ್ನಾ ವಿಚಾರವಾಗಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಲಮನ್ನಾ ಮಾಡಲು ಭಾರಿ ಮೊತ್ತದ ಹಣ ಬೇಕಾಗುತ್ತದೆ ಸರ್ಕಾರ ಹಣವನ್ನು ಕೂಡಿಸಬೇಕಾಗುತ್ತದೆ. ಗಿಡ ನೆಡುತ್ತೇವೋ ಅಥವಾ ಮರದಿಂದ ಹಣ ತರುತ್ತೇವೋ ಗೊತ್ತಿಲ್ಲ. ಒಟ್ಟಿನಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ, ಎಂದ ಅವರು ಹಂತ ಹಂತವಾಗಿ ಸಾಲ ಮನ್ನಾವನ್ನು ಮಾಡಲಾಗುತ್ತದೆ ಅಲ್ಲಿಯವರೆಗೆ ಸ್ವಲ್ಪ ತಾಳ್ಮೆ ಬೇಕು ಎಂದು ರಾಯಚೂರಿನಲ್ಲಿ ತಿಳಿಸಿದ್ದಾರೆ.