ಮುಂಬೈ: ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ರಾಜಮ್ ಮಲ್ಹೋತ್ರಾ(91) ಅವರು ಅಂಧೇರಿ ನಿವಾಸದಲ್ಲಿ ಮೃತಪಟ್ಟಿದ್ದಾರೆ. 1927ರ ಜುಲೈ ತಿಂಗಳಲ್ಲಿ ಕೇರಳದ ಎರ್ನಾಕುಲಂದಲ್ಲಿ ಇವರು ಜನಿಸಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಚೆನ್ನೈಗೆ ತೆರಳಿದ್ದರು.1951ರಲ್ಲಿ ಭಾರತೀಯ ನಾಗರಿಕ ಸೇವೆಗೆ ಸೇರ್ಪಡೆಯಾದರು. ಮೊದಲು ಮದ್ರಾಸ್ ಕೇಡರ್ಗೆ ಸೇರಿದ್ದ ಮಲ್ಹೋತ್ರಾ ಅಂದಿನ ಸಿಎಂ ಸಿ ರಾಜಗೋಪಾಲಚಾರಿ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದರು. 1985-1990ರಲ್ಲಿ ಆರ್ಬಿಐ ಗವರ್ನರ್ ಆಗಿದ್ದ ಆರ್ಎನ್ ಮಲ್ಹೋತ್ರಾ ಅವರನ್ನ ಅನ್ನಾ ರಾಜಮ್ ವಿವಾಹವಾಗಿದ್ದರು.










